Saturday, May 4, 2024
Homeತಾಜಾ ಸುದ್ದಿಮದುವೆಯ ಆರತಕ್ಷತೆ ವೇಳೆ ವೇದಿಕೆಯ ಮೇಲೆ ಕುಸಿದು ಬಿದ್ದ ಮದುಮಗಳು, ಮೆದುಳು ನಿಷ್ಕ್ರಿಯಗೊಂಡ ಮಗಳ ಅಂಗಾಂಗ...

ಮದುವೆಯ ಆರತಕ್ಷತೆ ವೇಳೆ ವೇದಿಕೆಯ ಮೇಲೆ ಕುಸಿದು ಬಿದ್ದ ಮದುಮಗಳು, ಮೆದುಳು ನಿಷ್ಕ್ರಿಯಗೊಂಡ ಮಗಳ ಅಂಗಾಂಗ ದಾನ ಮಾಡಿದ ಪೋಷಕರು..!

spot_img
- Advertisement -
- Advertisement -

ಬೆಂಗಳೂರು: ಮದುವೆಯ ಆರತಕ್ಷತೆ ವೇಳೆ ವೇದಿಕೆಯ ಮೇಲೆ ಕುಸಿದು ಬಿದ್ದು ಮೆದುಳು ನಿಷ್ಕ್ರಿಯಗೊಂಡ ಯುವತಿ. ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದು, ಈ ಕ್ರಮವನ್ನು ರಾಜ್ಯದ ಆರೋಗ್ಯ ಸಚಿವ ಕೆ.ಸುಧಾಕರ್ ಶ್ಲಾಘಿಸಿದ್ದಾರೆ.

ವರನೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಾ, ಅತಿಥಿಗಳನ್ನು ಸ್ವಾಗತಿಸುತ್ತಿದ್ದ ವೇದಿಕೆಯಲ್ಲಿದ್ದ 26 ವರ್ಷದ ಚೈತ್ರಾ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಕೆಯ ಪೋಷಕರು ಆಕೆಯನ್ನು NIMHNS ಗೆ ಕರೆದೊಯ್ದಾಗ, ವೈದ್ಯರು ಅವಳ ‘ಮೆದುಳು ನಿಷ್ಕ್ರಿಯಗೊಂಡಿದೆ’ ಎಂದು ಘೋಷಿಸಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಈ ಘಟನೆ ನಡೆದಿದೆ.

ಆಘಾತಕಾರಿ ಸುದ್ದಿ ಕೇಳಿ ಕಂಗಾಲಾದ ಚೈತ್ರಾ ಪೋಷಕರು ನಂತರ ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಚೈತ್ರಾ ಅವರ ಪೋಷಕರ ಉದಾತ್ತ ಕಾರ್ಯವನ್ನು ಶ್ಲಾಘಿಸಿದ ಸುಧಾಕರ್ ಅವರು ಹೀಗೆ ಹೇಳಿದರು: “ಇದು ಚೈತ್ರಾಗೆ ಬಹಳ ದೊಡ್ಡ ದಿನವಾಗಿತ್ತು. ಆದರೆ ವಿಧಿಯ ಆಟವೇ ಬೇರೆ ಆಗಿತ್ತು, ಹೃದಯ ವಿದ್ರಾವಕ ದುರಂತದ ಹೊರತಾಗಿಯೂ, ಆಕೆಯ ಪೋಷಕರು ಅವಳ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈ ನಿರ್ಧಾರ ಅನೇಕ ಜೀವಗಳನ್ನು ಉಳಿಸುತ್ತದೆ.”

ಇದಕ್ಕೂ ಮುನ್ನ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಕುಶಾಲನಗರದ 21 ವರ್ಷದ ಪ್ರಜ್ವಲ್‌ನ ಪೋಷಕರು ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡಿದ್ದರು. ಇತರ ಜೀವಗಳನ್ನು ಉಳಿಸುವ ಅವರ ಉದಾತ್ತ ನಿರ್ಧಾರಕ್ಕಾಗಿ ಸುಧಾಕರ್ ಅವರ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು.

- Advertisement -
spot_img

Latest News

error: Content is protected !!