Wednesday, June 26, 2024
Homeತಾಜಾ ಸುದ್ದಿಮಗಳ ಅಂತರ್ಜಾತಿ ವಿವಾಹಕ್ಕೆ ಮನನೊಂದ ದಂಪತಿ ನೀರಿನ ಸಂಪ್‍ಗೆ ಹಾರಿ ಆತ್ಮಹತ್ಯೆ..!

ಮಗಳ ಅಂತರ್ಜಾತಿ ವಿವಾಹಕ್ಕೆ ಮನನೊಂದ ದಂಪತಿ ನೀರಿನ ಸಂಪ್‍ಗೆ ಹಾರಿ ಆತ್ಮಹತ್ಯೆ..!

spot_img
- Advertisement -
- Advertisement -

ನೆಲಮಂಗಲ: ಮಗಳ ಅಂತರ್ಜಾತಿ ವಿವಾಹಕ್ಕೆ ಮನನೊಂದ ದಂಪತಿ ಮನೆ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದ ನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಾರೋಕ್ಯಾತನಹಳ್ಳಿ ನಿವಾಸಿ ಶಿವಲಿಂಗಸ್ವಾಮಿ (51), ಚಂದ್ರಕಲಾ (46) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಶಿವಲಿಂಗಸ್ವಾಮಿ ಅವರು ಗಾರ್ಮೆಂಟ್ಸ್ ವೊಂದರಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಗೃಹಿಣಿ.

ಈ ದಂಪತಿಯ ಪುತ್ರಿ ಸೌಮ್ಯ, ನಿನ್ನೆ ಬೇರೆ ಜಾತಿಯ ಯುವಕನೊಬ್ಬನೊಂದಿಗೆ ವಿವಾಹ ಮಾಡಿಕೊಂಡಿದ್ದು, ಇದು ದಂಪತಿಗೆ ಇಷ್ಟವಾಗಿರಲಿಲ್ಲ. ಅದೇ ಕಾರಣಕ್ಕೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಸಂಪ್ ಬಳಿ ನಮ್ಮ ಸಾವಿಗೆ ನಾವೇ ಜವಾಬ್ದಾರರು ಎಂಬ ಡೆತ್ ನೋಟ್ ಸಿಕ್ಕಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!