Sunday, June 7, 2026
Homeಕರಾವಳಿಮಂಗಳೂರು: ಪಲ್ಲಿಯಬ್ಬ ಹತ್ಯೆ ಪ್ರಕರಣ: ಐವರು ಆರೋಪಿಗಳು ದೋಷಿ

ಮಂಗಳೂರು: ಪಲ್ಲಿಯಬ್ಬ ಹತ್ಯೆ ಪ್ರಕರಣ: ಐವರು ಆರೋಪಿಗಳು ದೋಷಿ

- Advertisement -
- Advertisement -

ಮಂಗಳೂರು: ಮಲಾರ್ ಗ್ರಾಮದ ವೃದ್ಧರೊಬ್ಬರನ್ನು ಹತ್ಯೆಗೈದು ಹೂತಿಟ್ಟ ಪ್ರಕರಣ ಸಂಬಂಧ ಐವರು ಆರೋಪಿಗಳು ದೋಷಿಗಳೆಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆಗೆ ಕಾಯ್ದಿರಿಸಿದೆ.

ಮಲಾ‌ರ್ ಅಕ್ಷರ ನಗರ ನಿವಾಸಿ ಹಂಝ ಅಬ್ಬಾಸ್ (44), ಮಲಾರ್ ಅರಸ್ತಾನ ಸೈಟ್ ನಿವಾಸಿ ಅಝರುದ್ದೀನ್ (27), ಸಜಿಪನಡು ಕಂಚಿನಡ್ಕಪದವು ನಿವಾಸಿಗಳಾದ ಅಮೀರ್ ಶೇಖ್ ಯಾನೆ ಅಮ್ಮಿ (26), ಅರ್ಫಾಝ್ ಅಬ್ದುಲ್ ರಝಾಕ್ (20) ಹಾಗೂ ಅಥಾವುಲ್ಲ ಯಾನೆ ಅಲ್ತಾಫ್ ದೋಷಿಗಳೆಂದು ತೀರ್ಪು ನೀಡಲಾಗಿದೆ. ಇವರು ಪಲ್ಲಿಯಬ್ಬ ಎಂಬ ವ್ಯಕ್ತಿಯನ್ನು ಮಲಾರ್ ಎಂಬಲ್ಲಿ ಹಣಕ್ಕಾಗಿ ಹತ್ಯೆ ಮಾಡಿದ್ರು.

- Advertisement -

Latest News

error: Content is protected !!