Friday, April 26, 2024
Homeಉದ್ಯಮಪ್ರಧಾನಿ ಮೋದಿಗೆ ಮಂಗಳೂರಿನ ಪಬ್ಬಾಸ್ ಆಫರ್!

ಪ್ರಧಾನಿ ಮೋದಿಗೆ ಮಂಗಳೂರಿನ ಪಬ್ಬಾಸ್ ಆಫರ್!

spot_img
- Advertisement -
- Advertisement -

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಮಂಗಳೂರಿನ ಪಬ್ಬಾಸ್ ಕೆಫೆ ಬೆಸ್ಟ್ ಐಸ್ ಕ್ರೀಮ್ ಆಫರ್ ಕೊಟ್ಟಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಜೊತೆ ಐಸ್ ಕ್ರೀಮ್ ಸವಿಯಲು ಬೆಸ್ಟ್ ಐಸ್ ಕ್ರೀಮ್ ಟ್ರೀಟ್ ನೀಡುವುದಾಗಿ ಪಬ್ಬಾಸ್ ಕೆಫೆ ಐಡಿಯಲ್ ಐಸ್ ಕ್ರೀಮ್ ಟ್ವೀಟ್ ಮಾಡಿದೆ.

ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ಒಲಿಂಪಿಕ್ಸ್ ಗೆ ತೆರಳುವ ಮುನ್ನ ವಾಪಸಾದ ಬಳಿಕ ಜೊತೆಯಾಗಿ ಐಸ್ ಕ್ರೀಮ್ ಸೇವಿಸೋಣ ಎಂದು ಮೋದಿ ಭರವಸೆ ಕೊಟ್ಟಿದ್ದರು. ಆಟಗಾರರ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ವೇಳೆ ಸಿಂಧು ಜೊತೆ ಡಯಟ್ ಕುರಿತಾಗಿ ಮೋದಿ ವಿಚಾರಿಸಿದ್ದರು. ಆಗ ನನಗೆ ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟ, ಈಗ ಒಲಿಂಪಿಕ್ ಗಾಗಿ ಡಯಟ್ ನಲ್ಲಿರುವ ಹಿನ್ನೆಲೆಯಲ್ಲಿ ತಿನ್ನುವುದನ್ನು ನಿಲ್ಲಿಸಿದ್ದೇನೆ ಎಂದು ಸಿಂಧು ಹೇಳಿದ್ದರು.‌

ಈ ಹಿನ್ನೆಲೆಯಲ್ಲಿ ಆತ್ಮ ನಿರ್ಭರ್ ಭಾರತ್, ಲೋಕಲ್ ವೋಕಲ್ ಅಡಿಯಲ್ಲಿ ದೇಶದ ಪ್ರತಿಭಾನ್ವಿತ ಕ್ರೀಡಾಪಟು ಜೊತೆ ಸೇವಿಸಲು ಬೆಸ್ಟ್ ಐಸ್ ಕ್ರೀಮ್ ಟ್ರೀಟ್ ನೀಡುವುದಾಗಿ ಪಬ್ಬಾಸ್ ಟ್ವಿಟರ್ ನಲ್ಲಿ ಹೇಳಿಕೊಂಡಿದೆ.

ಇನ್ನು ಗುಜರಾತ್ ಮುಖ್ಯಮಂತ್ರಿ ಆಗುವ ಮೊದಲು ಒಂದು ಬಾರಿ ನರೇಂದ್ರ ಮೋದಿ ಪಬ್ಬಾಸ್ ಗೆ ಭೇಟಿ ಕೊಟ್ಟಿದ್ದರು ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!