Monday, May 6, 2024
Homeತಾಜಾ ಸುದ್ದಿತನ್ನ ಪ್ರೀತಿಯ ನಾಯಿಯ ಹುಟ್ಟುಹಬ್ಬ ಆಚರಿಸಿ, 5000 ಮಂದಿಗೆ ಊಟ ಹಾಕಿಸಿದ ಮಾಲೀಕ

ತನ್ನ ಪ್ರೀತಿಯ ನಾಯಿಯ ಹುಟ್ಟುಹಬ್ಬ ಆಚರಿಸಿ, 5000 ಮಂದಿಗೆ ಊಟ ಹಾಕಿಸಿದ ಮಾಲೀಕ

spot_img
- Advertisement -
- Advertisement -

ಬೆಳಗಾವಿ: ಮಾಲೀಕನೊಬ್ಬ ತನ್ನ  ಪ್ರೀತಿಯ ಶ್ವಾನದ ಹುಟ್ಟುಹಬ್ಬ ಆಚರಿಸಿ 5000 ಜನರಿಗೆ ಬಾಡೂಟ ಹಾಕಿ ನಾಯಿಯ ಬಗೆಗಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಪ್ಪ ಮರ್ದಿ ಅವರು ಸಾಕಿದ ‘ಕ್ರಿಶ್‌’ ಎಂಬ ನಾಯಿಯ ಜನ್ಮದಿನವನ್ನು ಜೂನ್‌ 21ರಂದು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ.

ನಾಯಿಯನ್ನು ಅಲಂಕೃತ ಜೀಪ್‌ನಲ್ಲಿ ಕೂರಿಸಿ, ವಾದ್ಯಮೇಳಗಳೊಂದಿಗೆ ಮೆರವಣಿಗೆ ಮಾಡಿದ್ದಾರೆ. 50 ಕೆ.ಜಿ ತೂಕದ ಕೇಕ್‌ ಕತ್ತರಿಸಿ ನಾಯಿಗೂ ತಿನ್ನಿಸಿ, ಜನರಿಗೂ ಹಂಚಿದ್ದಾರೆ. ಊರ ಜನರಿಗಾಗಿ 2 ಕ್ವಿಂಟಾಲ್‌ ಚಿಕನ್‌, 200 ಮೊಟ್ಟೆ, 50 ಕೆ.ಜಿ ಕಾಜೂಕರಿ ಸೇರಿದಂತೆ ಒಟ್ಟು 5 ಸಾವಿರ ಮಂದಿಗೆ ಊಟ ಹಾಕಿದ್ದಾರೆ.

’20 ವರ್ಷಗಳಿಂದ ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೆ. ಈ ಬಾರಿ ಹೊಸಬರು ಆಯ್ಕೆಯಾಗಿದ್ದಾರೆ. ಈಚೆಗೆ ಅವರ ಜನ್ಮದಿನ ಆಚರಿಸಿಕೊಂಡರು. ಆ ಸಂದರ್ಭದಲ್ಲಿ ‘ಈ ಹಿಂದಿನ ಸದಸ್ಯರು ಅನುದಾನವನ್ನು ನಾಯಿಯಂತೆ ತಿಂದು ಹೋಗಿದ್ದಾರೆ’ ಎಂಬ ಆರೋಪ ಮಾಡಿದ್ದರು. ಅವರ ಮಾತಿಗೆ ತಕ್ಕ ಉತ್ತರ ನೀಡಲು ನನ್ನ ನಾಯಿಯ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!