Thursday, June 4, 2026
Homeತಾಜಾ ಸುದ್ದಿಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ ಸರ್ಕಾರಕ್ಕಿಲ್ಲ: ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ ಸರ್ಕಾರಕ್ಕಿಲ್ಲ: ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

- Advertisement -
- Advertisement -

ನವದೆಹಲಿ: ಸರ್ಕಾರದ ಮಟ್ಟದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ, ವಿಚಾರ ಹಾಗೂ ಪ್ರಸ್ತಾಪವೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಮಾತನಾಡಿದ ಸಿಎಂ, ಸಚಿವ ಉಮೇಶ ಕತ್ತಿಯವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಉಮೇಶ್ ಕತ್ತಿಯವರು ಈ ರೀತಿ ಹೇಳಿಕೆ ನೀಡಿರುವುದು ಮೊದಲ ಬಾರಿಯೇನಲ್ಲ ಎಂದಿದ್ದಾರೆ.

ಹತ್ತು ಹಲವಾರು ವರ್ಷಗಳಿಂದ ಉಮೇಶ್ ಕತ್ತಿ ಇದನ್ನು ಹೇಳುತ್ರಿದ್ದು, ಅದಕ್ಕೆ ಅವರೇ ಉತ್ತರ ನೀಡಬೇಕು ಎಂದು ಸಿಎಂ ತಿಳಿಸಿದ್ದಾರೆ. ನಿನ್ನೆ ಬೆಳಗಾವಿಯಲ್ಲಿ 2024 ರ ಲೋಕಸಭಾ ಚುನಾವಣೆ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಹೇಳಿದ್ದ ಉಮೇಶ್ ಕತ್ತಿ, ಇಂದು ಮತ್ತೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

- Advertisement -

Latest News

error: Content is protected !!