Saturday, May 4, 2024
Homeಕರಾವಳಿಉಡುಪಿಉಡುಪಿ; ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಅಂಗಾಂಗ ದಾನ; 7 ಮಂದಿಗೆ ಹೊಸ ಬದುಕು ನೀಡಿ ಸಾವಿನಲ್ಲೂ...

ಉಡುಪಿ; ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಅಂಗಾಂಗ ದಾನ; 7 ಮಂದಿಗೆ ಹೊಸ ಬದುಕು ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಉಲ್ಲಾಸ್

spot_img
- Advertisement -
- Advertisement -

ಉಡುಪಿ; ಅಪಘಾತದಲ್ಲಿ ಸಾವನ್ನಪ್ಪಿದ ಯುವಕನೊಬ್ಬ ಅಂಗಾಂಗ ದಾನ ಮಾಡಿ 7 ಮಂದಿಗೆ ಹೊಸ ಬದುಕು ನೀಡಿದ್ದಾನೆ.ಕಳೆದ ಶನಿವಾರ ಭದ್ರಾವತಿ ತಾಲೂಕಿನ ಚೆನ್ನಗಿರಿಯಲ್ಲಿ ಅಪಗಾತದಲ್ಲಿ  ತೀವ್ರವಾಗಿ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾದ 21 ವರ್ಷ ಯುವಕ ಉಲ್ಲಾಸ್  ಚಿಕಿತ್ಸೆಗೆ ಸ್ಪಂದಿಸದೇ ಅವರ ಮೆದುಳು ನಿಷ್ಕ್ರೀಯಗೊಂಡಿತ್ತು.  ಹೀಗಾಗಿ ಅವರ ಕುಟುಂಬದವರು ಆತನ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಅದರಂತೆ ಉಲ್ಲಾಸ ಹೆಸರಿಗೆ ತಕ್ಕಂತೆ 7 ಮಂದಿಯ ಬದುಕಿನಲ್ಲಿ ಹೊಸ ಉಲ್ಲಾಸ ತಂದಿದ್ದಾರೆ.

ಉಲ್ಲಾಸ್ ಅವರುಎ.22ರ ಅಪರಾಹ್ನ 3:00 ಗಂಟೆ ಸುಮಾರಿಗೆ ಭದ್ರಾವತಿ ತಾಲೂಕಿನ ಚೆನ್ನಗಿರಿ ರಸ್ತೆಯಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು  ಏಪ್ರಿಲ್ 23 ರಂದು ಬೆಳಗ್ಗೆ 10:47ಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಉಲ್ಲಾಸ್ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.

ಇದರಿಂದ ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ಉಲ್ಲಾಸ್ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. ಮೊದಲ ಬಾರಿಗೆ ಎ.24ರ ರಾತ್ರಿ 8:30ಕ್ಕೆ ಹಾಗೂ ಮತ್ತೊಮ್ಮೆ ಎ.25ರ ಮುಂಜಾನೆ 3:23ಕ್ಕೆ.ಬಳಿಕ ಉಲ್ಲಾಸ್ ಅವರ ತಂದೆ ರಾಜಪ್ಪ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ದಾನ ಮಾಡಿದ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು ಮತ್ತು ಎರಡು ಕಾರ್ನಿಯಾ ಗಳು ಒಟ್ಟು 7 ಮಂದಿ ರೋಗಿಗಳ ಜೀವ ಉಳಿಸಲು ಸಹಾಯವಾಯಿತು.

ಜೀವನ ಸಾರ್ಥಕತೆ ಪ್ರೋಟೋಕಾಲ್‌ಗಳು ಮತ್ತು ನಿರ್ಧಾರಗಳ ಪ್ರಕಾರ, ಶ್ವಾಸಕೋಶಗಳನ್ನು ಅಪೊಲೊ ಆಸ್ಪತ್ರೆ ಚೆನ್ನೈ, ಯಕೃತ್‌ನ್ನು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆ, ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ. ಜೆ. ಆಸ್ಪತ್ರೆ ಮತ್ತು ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡ ವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ನೋಂದಾಯಿತ ರೋಗಿಗಳಿಗೆ ನೀಡಿ ಜೀವದಾನ ಮಾಡಲಾಗಿದೆ.

ಮಗನ ಅಂಗಾಂಗಗಳ ದಾನದ ಕುರಿತು ಮಾತನಾಡಿದ ರಾಜಪ್ಪ, ಇದೊಂದು ಪುಣ್ಯದ ಕೆಲಸ ಎಂದು ತಾವು ಭಾವಿಸುತ್ತೇವೆ. ತನ್ನ ಮಗ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದರು.ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಕೆಎಂಸಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!