- Advertisement -
- Advertisement -
ಮಂಗಳೂರು: ಐಫೋನ್ ಹೆಸರಲ್ಲಿ ವೈದ್ಯಕೀಯ ವಿದ್ಯಾರ್ಥಿಗೆ ವಂಚನೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಹುಮಾನ ಗೆದ್ದಿರುವುದಾಗಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿನಿಗೆ ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.3ರಂದು ಅಪರಿಚಿತನೊಬ್ಬ ಕರೆ ಮಾಡಿ ‘ನೀವು ಐ ಫೋನ್ ಪ್ರೊ-12 ಗೆದ್ದಿದ್ದೀರಿ.ಅದನ್ನು ಕಳುಹಿಸಿಕೊಡಲು ಜಿಎಸ್‌ಟಿ ಪಾವತಿಸಬೇಕು’ ಎಂದು ಹೇಳಿದ್ದಾನೆ. ಅದನ್ನು ನಂಬಿದ ತಾನು ಗೂಗಲ್‌ಪೇ ಮೂಲಕ ಹಂತ ಹಂತವಾಗಿ 98,972 ರೂ. ಕಳುಹಿಸಿದ್ದೆ. ಬಳಿಕ ಅಪರಿಚಿತ ವ್ಯಕ್ತಿ ಮತ್ತಷ್ಟು ಹಣವನ್ನು ಕಳುಹಿಸುವಂತೆ ಸೂಚಿಸಿದ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
- Advertisement -