Thursday, March 28, 2024
Homeಉದ್ಯಮಈರುಳ್ಳಿ ಬೆಲೆ ಏರಿಕೆ: ನವೆಂಬರ್‌ ತನಕ ಮಾರುಕಟ್ಟೆಗೆ ಬರಲ್ಲ ಹೊಸ ಈರುಳ್ಳಿ

ಈರುಳ್ಳಿ ಬೆಲೆ ಏರಿಕೆ: ನವೆಂಬರ್‌ ತನಕ ಮಾರುಕಟ್ಟೆಗೆ ಬರಲ್ಲ ಹೊಸ ಈರುಳ್ಳಿ

spot_img
- Advertisement -
- Advertisement -

ಬೆಂಗಳೂರು: ಬೆಲೆ ಏರಿಕೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆಯಾಗಿ ತರಕಾರಿ ದರ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಎಲ್ಲಾ ಬಗೆಯ ಈರುಳ್ಳಿಯನ್ನು ರಫ್ತು ಮಾಡುವುದಕ್ಕೆ ನಿಶೇಧ ಹೇರಿ ಆದೇಶ ಹೊರಡಿಸಿದ್ದರ ಪರಿಣಾಮ ಈರುಳ್ಳಿ ದರ ಏರಿಕೆಯಾಗಿದೆ. ಈ ಮೂಲಕ ಕಳೆದಬಾರಿಯ ಪರಿಸ್ಥಿತಿ ಮರುಕಳಿಸುವ ಲಕ್ಷಣ ಗೋಚರಿಸುತ್ತಿದೆ. ಈ ನಡುವೆ ಈರುಳ್ಳಿ ದರ ಮತ್ತೆ ಏರಿಕೆಯಾಗತೊಡಗಿದ್ದು, ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ.

ಮಾರುಕಟ್ಟೆಗೆ ನವೆಂಬರ್‌ ತನಕ ಹೊಸ ಈರುಳ್ಳಿ ಬರೋದಿಲ್ಲ ಎನ್ನಲಾಗುತ್ತಿದ್ದು ಹಳೇ ದಾಸ್ತಾನಿನ ಈರುಳ್ಳಿಯನ್ನು ವರ್ತಕರು ಹಾಗೂ ಗ್ರಾಹಕರು ಬಳಕೆ ಮಾಡಿಕೊಳ್ಳಬೇಕಾಗಿದೆ. ಎರಡು ವಾರಗಳ ಹಿಂದೆ ಪ್ರತಿ ಕಿ.ಲೋ ಗ್ರಾಂಗೆ 20-25 ರೂಗಳಿಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ ಮತ್ತೆ 30-45 ರೂ.ವರೆಗೆ ಮಾರಾಟವಾಗುತ್ತಿದೆ.ಇನ್ನು ತರಕಾರಿ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಗ್ರಾಹಕನ ನಿದ್ದೆ ಕೆಡಿಸಿದೆ.

- Advertisement -
spot_img

Latest News

error: Content is protected !!