Friday, October 23, 2026
Homeಕರಾವಳಿಒಂದು ವರ್ಷ ವಯಸ್ಸಿನ ಆನೆ ಮರಿ ಸಾವು!

ಒಂದು ವರ್ಷ ವಯಸ್ಸಿನ ಆನೆ ಮರಿ ಸಾವು!

- Advertisement -
- Advertisement -

ಸುಳ್ಯ: ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಆನೆ ಮರಿ ಮೃತಪಟ್ಟಿದೆ. ಚಂದ್ರಶೇಖರ ಎಂಬವರ ತೋಟದಲ್ಲಿ ಈ ಘಟನೆ ನಡೆದಿದ್ದು, ಭಾಗಮಂಡಲದ ಮೀಸಲು ಅರಣ್ಯದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ ಮತ್ತು ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ ಎಂದು ತಿಳಿದುಬಂದಿದೆ.

ತೋಟವು ಎತ್ತರ ಪ್ರದೇಶದಲ್ಲಿರುವುದರಿಂದ ಕಾಡಿನತ್ತ ಮರಳುವ ವೇಳೆ ಆನೆ ಮರಿ ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯ ಮೇಲೆ ಮೆಟ್ಟಿದ್ದರಿಂದ ಅದು ಮೃತಪಟ್ಟಿರಬಹುದು ಎನ್ನಲಾಗಿದೆ.

ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಆನೆ ಮರಿಯ ಸಾವಿಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -

Latest News

error: Content is protected !!