Tuesday, June 25, 2024
Homeಅಪರಾಧಮಂಗಳೂರು: ಗಾಂಜಾ ಹಾಗು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

ಮಂಗಳೂರು: ಗಾಂಜಾ ಹಾಗು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

spot_img
- Advertisement -
- Advertisement -

ಮಂಗಳೂರು: ಸೋಮೇಶ್ವರ ಸೋಮನಾಥ ನಗರ ಬಡಾವಣೆಯ ಅಂಗಡಿಯೊಂದರ ಬಳಿ ಗಾಂಜಾ ಮತ್ತು ಹ್ಯಾಶಿಶ್ ಲಿಕ್ವಿಡ್ ಹೊಂದಿದ್ದ ಆರೋಪಿ ಕೋಟೆಕಾರ್‌ನ ಹರ್ಷವರ್ಧನ ಎಂಬಾತನನ್ನು ಅಬಕಾರಿ ಪೊಲೀಸ್ ತಂಡ ಬಂಧಿಸಿದೆ.

ಬಂಧಿತ ಆರೋಪಿಯಿಂದ ಅಕ್ರಮವಾಗಿ ಮಾರಾಟ ಮಾಡಲು 120 ಗ್ರಾಂ ಒಣ ಗಾಂಜಾ ಹಾಗೂ 20 ಗ್ರಾಂ ಹ್ಯಾಶಿಶ್ ಲಿಕ್ವಿಡ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಶೈಲಜಾ ಮಾರ್ಗದರ್ಶನದಂತೆ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ ಸಿದ್ಧಪ್ಪ ಮೇಟಿ, ಆಶಿಶ್ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!