Thursday, June 4, 2026
Homeಕರಾವಳಿಬೇಲೂರು: ಮರಕ್ಕೆ ಆಲ್ಟೋ ಕಾರು ಡಿಕ್ಕಿ- ಬೆಳ್ತಂಗಡಿ ಮೂಲದ ವ್ಯಕ್ತಿ ಸಾವು

ಬೇಲೂರು: ಮರಕ್ಕೆ ಆಲ್ಟೋ ಕಾರು ಡಿಕ್ಕಿ- ಬೆಳ್ತಂಗಡಿ ಮೂಲದ ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ: ಬೇಲೂರು ಬಳಿ ಮರಕ್ಕೆ ಆಲ್ಟೊ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು ಬಳಿ ಕಳೆದ ರಾತ್ರಿ ನಡೆದಿದೆ. ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪೆರಾಲ್ದರಕಟ್ಟೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಕಾರಿನಲ್ಲಿ ಸಹಪ್ರಯಾಣಿಕರಾಗಿದ್ದ ಇನ್ನೂ ಮೂವರಿಗೆ ಹೆಚ್ಚಿನ ಗಾಯಗಳಾಗಿವೆ ಎಂದೂ ತಿಳಿದುಬಂದಿದೆ. ಗಾಯಾಳುಗಳನ್ನು ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನೂರ್ ಮುಹಮ್ಮದ್, ಬಳಂಜದ ಅಝೀಝ್ ಹಾಗೂ ಕಕ್ಕಿಂಜೆಯ ಗಾಂಧಿ ನಗರ ನಿವಾಸಿ ಸಲೀಂ ಎಂಬವರಾಗಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊರೆದೊಯ್ಯಲಾಗಿದೆ.

ಇವರೆಲ್ಲರೂ ಸಂಬಂದಿಗಳು ಹಾಗೂ ಸ್ನೇಹಿತರಾಗಿದ್ದು ಗಾರೆ ಕೆಲಸ, ಮೇಸ್ತ್ರಿ ಕೆಲಸ ಮಾಡಿಕೊಂಡವರಾಗಿದ್ದಾರೆ. ಒಟ್ಟಿಗೆ ಜೊತೆಯಾಗಿ ಇವರು ತೀರ್ಥಕ್ಷೇತ್ರ ಝಿಯಾರತ್ ಗಾಗಿ ಆ ಭಾಗಕ್ಕೆ ತೆರಳಿ ವಾಪಾಸಾಗುತ್ತಿದ್ದಾಗ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.

ಮೃತರಾದ ಶರೀಫ್ ಅವರ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಅವರ ಶರೀರವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತರಲಾಗಿದೆ.

- Advertisement -

Latest News

error: Content is protected !!