- Advertisement -
- Advertisement -
ಮಧ್ಯಪ್ರದೇಶ: ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ತಂದಿದ್ದ ಎಂಟು ಚೀತಾಗಳಲ್ಲಿ ಒಂದು ಚೀತಾ ಸಾವನ್ನಪ್ಪಿದೆ. ಜನವರಿಯಲ್ಲಿ ʻಸಶಾʼ ಹೆಸರಿನ ಒಂದು ಚೀತಾಕ್ಕೆ ಮೂತ್ರಪಿಂಡದ ಸೋಂಕು ಕಾಣಿಸಿಕೊಂಡಿತ್ತು. ಪರಿಣಾಮ ನಿನ್ನೆ ಸಶಾ ಸಾವನ್ನಪ್ಪಿದೆ.
ದಿನನಿತ್ಯದ ಮಾನಿಟರಿಂಗ್ ವೇಳೆ ಸಶಾ ಆಯಾಸದಿಂದ ಬಳಲುತ್ತಿತ್ತು. ಹಾಗೂ ಅಸಹಾಯಕ ಸ್ಥಿತಿಯಲಿತ್ತು ಎನ್ನಲಾಗಿತ್ತು. ಜನವರಿಯಿಂದಲೇ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದರೂ ಅದು ಸಾವನ್ನಪ್ಪಿದೆ.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಚೀತಾಗಳ ಮೊದಲ ಬ್ಯಾಚ್‌ನ ಭಾಗವಾಗಿದ್ದ ಸಶಾ, ಕಳೆದ ವರ್ಷ ಮಹತ್ವಾಕಾಂಕ್ಷೆಯ ಮರುಪರಿಚಯ ಕಾರ್ಯಕ್ರಮದ ಭಾಗವಾಗಿ ನಮೀಬಿಯಾದಿಂದ ಬಂದ ಐದು ಹೆಣ್ಣು ಚೀತಾಗಳಲ್ಲಿ ಒಂದಾಗಿದೆ.
- Advertisement -