Saturday, May 11, 2024
Homeಕರಾವಳಿಧರ್ಮಸ್ಥಳದಲ್ಲಿ ಮೇ 3 ರಂದು ಉಚಿತ ಸಾಮೂಹಿಕ ವಿವಾಹ

ಧರ್ಮಸ್ಥಳದಲ್ಲಿ ಮೇ 3 ರಂದು ಉಚಿತ ಸಾಮೂಹಿಕ ವಿವಾಹ

spot_img
- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಈ ಮೇ 3 ರ ಬುಧವಾರ ಸಂಜೆ 6.40 ಕ್ಕೆ ಗೋಧೂಳಿ ಲಗ್ನದಲ್ಲಿ ನಡೆಯಲಿದೆ. ಇದು 51 ನೇ ವರ್ಷದ ಉಚಿತ ಹಾಗೂ ಸಾಮೂಹಿಕ ವಿವಾಹವಾಗಿದೆ.

ಇನ್ನು ಈ ಉಚಿತ ಸಾಮೂಹಿ ವಿವಾಹದಲ್ಲಿ ಮದುವೆಯಾಗುವ ವರನಿಗೆ ಕ್ಷೇತ್ರದ ಕಡೆಯಿಂದ ಧೋತಿ ಮತ್ತು ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ನೀಡಲಾಗುತ್ತದೆ. 2 ನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ. ಮದುವೆಯ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತನ ಟ್ರಸ್ಟ್ ವತಿಯಿಂದ ಭರಿಸಲಾಗುತ್ತಿದೆ.

ಇದುವರೆಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಲ್ಲಿ 12,576 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆ.1972 ರಲ್ಲಿ ಇಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭವಾಯಿತು. ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರು ಏಪ್ರಿಲ್ 20 ರೊಳಗೆ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 08256-266644, ವಾಟ್ಸಪ್ 9663464648 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!