Tuesday, July 1, 2025
Homeಕರಾವಳಿಬಂಟ್ವಾಳ: ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಹಾಗೂ ಸಮರ್ಪಣಾ ಅಭಿಯಾನ ಕಾರ್ಯಕ್ರಮ!

ಬಂಟ್ವಾಳ: ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಹಾಗೂ ಸಮರ್ಪಣಾ ಅಭಿಯಾನ ಕಾರ್ಯಕ್ರಮ!

spot_img
- Advertisement -
- Advertisement -

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ನರಿಕೊಂಬು ಇದರ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಹಾಗೂ ಸಮರ್ಪಣಾ ಅಭಿಯಾನ ಕಾರ್ಯಕ್ರಮವು ಗುರುವಾರದಂದು ನರಿಕೊಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ನರಿಕೊಂಬು ಗ್ರಾಮದಲ್ಲಿ ಅಹರ್ನಿಶಿ ಶ್ರಮಿಸಿದ ಗ್ರಾಮ ಲೆಕ್ಕಾಧಿಕಾರಿ ಅತೀಕ್ ಕುಮಾರ್, ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರವೀಣ್ ಕುಮಾರ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಸುಮತಿ ಎಮ್. ಹಾಗೂ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಅನಿತಾ, ಶ್ರೀಮತಿ ಬೇಬಿ, ಶ್ರೀಮತಿ ಸಾವಿತ್ರಿ, ಶ್ರೀಮತಿ ಲೀಲಾವತಿ, ಶ್ರೀಮತಿ ಶೋಭಾ ಎಮ್., ಶ್ರೀಮತಿ ವಿಜಯ, ಶ್ರೀಮತಿ ಪೂರ್ಣಿಮ, ಶ್ರೀಮತಿ ಸುಜಾತ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಸುಲೋಚನಾ ಜಿಕೆ ಭಟ್, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಕಮಲಾಕ್ಷಿ ಪೂಜಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ , ಹಿರಿಯ ಕಾರ್ಯಕರ್ತರಾದ ಕೊರಗಪ್ಪ ಬಂಗೇರ ಕೆದ್ದೇಲು, ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಪ್ರಕಾಶ್ ಮಡಿಮುಗೇರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮ ಸಮಿತಿ ಸಹ ಸಂಚಾಲಕರಾದ ರಂಜಿತ್ ಮಾಣಿಮಜಲು, ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಸದಸ್ಯರಾದ ಪ್ರೇಮನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಎಸ್. ಸಿ. ಮೋರ್ಚಾ ಕಾರ್ಯದರ್ಶಿ ಸುರೇಂದ್ರ ನರಿಕೊಂಬು, ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಮಾಧ್ಯಮ ಪ್ರತಿನಿಧಿ ಪುರುಷೋತ್ತಮ ಕೊಪ್ಪಲಕೋಡಿ, ಬಿಜೆಪಿ ಪಂಚಾಯತ್ ಸದಸ್ಯರುಗಳಾದ ಅರುಣ್ ಬೋರುಗುಡ್ಡೆ, ರವಿ ಅಂಚನ್ ಅಬೆರೊಟ್ಟು, ರಂಜಿತ್ ಕೆದ್ದೇಲು, ನಾರಾಯಣ ದರ್ಖಾಸು, ಸಂತೋಷ್ ಕುಮಾರ್ ಶಂಭೂರು, ಉಷಾ ರಮಾನಂದ, ಶುಭ ಶಶಿಧರ್, ಮಮತಾ ಸುಧೀರ್, ರತ್ನ ನಿನ್ನಿಪಡ್ಪು, ಬಂಟ್ವಾಳ ರೈತ ಮೋರ್ಚಾ ಸದಸ್ಯರಾದ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಬಂಟ್ವಾಳ ಮಹಿಳಾ ಮೋರ್ಚಾ ಸದಸ್ಯರಾದ ಶ್ರೀಮತಿ ಭಾರತಿ, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಸದಸ್ಯರಾದ ಶ್ರೀಮತಿ ಶೋಭಾ ಶೆಟ್ಟಿ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ನಿರ್ದೇಶಕರಾದಂತಹ ಶ್ರೀಶ ರಾಯಸ, ಪ್ರಮುಖರಾದ ಬೂಬ ಸಾಲಿಯಾನ್, ಪುರುಷೋತ್ತಮ ಬಂಗೇರ, ಕಮಲಾಕ್ಷ ಭೀಮಗದ್ದೆ, ತಿಲಕ್ ರಾಜ್, ಗಣೇಶ್ ಕುಮಾರ್ ಅಂತರ, ಲೋಕೇಶ್ ಕರ್ಬೆಟ್ಟು, ಮಹೇಶ್ ರಾಯಸ, ದಯಾನಂದ ನೆಲ್ಯಡ್ಕ, ರೋಹಿತ್ ಪೂಜಾರಿ ಬೋಳಂತೂರು, ರಮಾನಾಥ ಪೈ, ಕರುಣಾಕರ ನೆಲ್ಯಡ್ಕ, ಪ್ರವೀಣ್ ಕುಮಾರ್ ತಾರಿಪಡ್ಪು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



ನರಿಕೊಂಬು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು ಸ್ವಾಗತಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ಪುರುಷೋತ್ತಮ ಸಾಲ್ಯಾನ್ ಪ್ರಸ್ತಾವನೆಗೈದು, ಬಿಜೆಪಿ ನರಿಕೊಂಬು ಗ್ರಾಮ ಸಮಿತಿ ಸಂಚಾಲಕರಾದ ಕಿಶೋರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಬಂಟ್ವಾಳ ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷರಾದ ಸುರೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!