Friday, June 5, 2026
Homeಕರಾವಳಿಬಂಟ್ವಾಳ: ಮಾಣಿಯಲ್ಲಿ ಹೊತ್ತಿ ಉರಿದ ಓಮ್ನಿ

ಬಂಟ್ವಾಳ: ಮಾಣಿಯಲ್ಲಿ ಹೊತ್ತಿ ಉರಿದ ಓಮ್ನಿ

- Advertisement -
- Advertisement -

ಬಂಟ್ವಾಳ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಇಂದು ನಡೆದಿದೆ.

ದೇರಳಕಟ್ಟೆ ಮೂಲದ ಕುಟುಂಬವೊಂದು ಓಮ್ನಿ ವಾಹನದಲ್ಲಿ ಮಾಣಿ ಕಡೆಗೆ ಪ್ರಯಾಣಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮತ್ತು ಪ್ರಯಾಣಿಕರು ಕೂಡಲೇ ವಾಹನ ನಿಲ್ಲಿಸಿ ಹೊರಗಡೆ ಬಂದಿದ್ದಾರೆ.

ತತ್‌ಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಸ್ಥಳೀಯ ವಿನಯ ಎಂಬವರ ಸರ್ವೀಸ್ ಸ್ಟೇಷನ್ ನಿಂದ ನೀರು ಹರಿಸಿ ಬೆಂಕಿಯನ್ನು ನಂದಿಸಲಾಯಿತು.

ಆದರೆ ಅಷ್ಟರಲ್ಲಿ ಓಮ್ನಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿದ್ದಾರೆ.

- Advertisement -

Latest News

error: Content is protected !!