Thursday, June 4, 2026
Homeಕರಾವಳಿಬೆಳ್ತಂಗಡಿ : ಚಲಿಸುತ್ತಿದ್ದ ಓಮಿನಿ ಕಾರು ಬೆಂಕಿಗಾಹುತಿ

ಬೆಳ್ತಂಗಡಿ : ಚಲಿಸುತ್ತಿದ್ದ ಓಮಿನಿ ಕಾರು ಬೆಂಕಿಗಾಹುತಿ

- Advertisement -
- Advertisement -

ಬೆಳ್ತಂಗಡಿ : ಗ್ಯಾರೇಜ್ ನಲ್ಲಿ ರಿಪೇರಿಗೆ ಇರಿಸಿದ್ದ ಓಮಿನಿ ಕಾರನ್ನು ಮೆಕ್ಯಾನಿಕ್ ಟೆಸ್ಟ್ ಡ್ರೈವ್ ಮಾಡಲು ತೆಗೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಬೆಳ್ತಂಗಡಿಯಲ್ಲಿ ಅ.22 ರಂದು ರಾತ್ರಿ ನಡೆದಿದೆ.

ಬೆಳ್ತಂಗಡಿ ನಗರದ ಕಲ್ಲಗುಡ್ಡೆ ರಸ್ತೆಯಲ್ಲಿ ಅ.22 ರಂದು ರಾತ್ರಿ ಓಮಿನಿ ಕಾರನ್ನು ಬೆಳ್ತಂಗಡಿ ಗ್ಯಾರೇಜಿನ ಮ್ಯಾಕ್ಯಾನಿಕ್ ಚಲಾಯಿಸಿಕೊಂಡು ಹೋಗುವಾಗ ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಈ ವೇಳೆ ಓಮಿನಿ ಕಾರು ಚರಂಡಿಗೆ ಬಿದ್ದಿದೆ. ಕಾರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ನಿವಾಸಿ ಗೀತಾ ಎಂಬವರಿಗೆ ಸೇರಿದ್ದು ಎನ್ನಲಾಗಿದ್ದು, ರಿಪೇರಿಗಾಗಿ ಬೆಳ್ತಂಗಡಿಯ l ಗ್ಯಾರೇಜ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!