Wednesday, June 24, 2026
Homeಕರಾವಳಿಮಂಗಳೂರುಕಡಬ; ಮಕ್ಕಳನ್ನು ಬಿಟ್ಟು ವಾಪಾಸ್ ಆಗ್ವಾಗ ಓಮ್ನಿ ಕಾರು ಬೆಂಕಿಗಾಹುತಿ: ಸ್ವಲ್ಪದರಲ್ಲೇ ತಪ್ಪಿದ ಮಹಾ ದುರಂತ

ಕಡಬ; ಮಕ್ಕಳನ್ನು ಬಿಟ್ಟು ವಾಪಾಸ್ ಆಗ್ವಾಗ ಓಮ್ನಿ ಕಾರು ಬೆಂಕಿಗಾಹುತಿ: ಸ್ವಲ್ಪದರಲ್ಲೇ ತಪ್ಪಿದ ಮಹಾ ದುರಂತ

- Advertisement -
- Advertisement -

ಕಡಬ; ಮಕ್ಕಳನ್ನು ಬಿಟ್ಟು ವಾಪಾಸ್ ಆಗ್ವಾಗ ಓಮ್ನಿ ಕಾರು ಬೆಂಕಿಗಾಹುತಿಯಾಗಿರುವ ಘಟನೆ ಕುಂತೂರುಪದವು-ಕೆದ್ದೊಟ್ಟೆ ಮಾರ್ಗದ ಪಂಜಳ ಎಂಬಲ್ಲಿ ನಡೆದಿದೆ.

ಚಾಲಕ ಮಕ್ಕಳನ್ನು ಶಾಲೆಗೆ ಬಿಟ್ಟು ವಾಪಾಸ್ ಬರುವಾಗ ಓಮ್ನಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ.  ಕಾರು ನಿಲ್ಲಿಸಿ ಚಾಲಕನ ಸೀಟ್ ತೆಗೆಯುತ್ತಿದ್ದಂತೆ ಬೆಂಕಿಯ ಕಿಡಿ ಅವರ ಕೈ ಹಾಗೂ ಮುಖಕ್ಕೆ ತಾಗಿ ಸುಟ್ಟ ಗಾಯವಾಗಿದೆ.

ಬೆಂಕಿಯಿಂದಾಗಿ ಓಮ್ನಿ ಕಾರು ಸಂಪೂರ್ಣ ಸುಟ್ಟುಹೋಗಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಎನ್ನಲಾಗಿದೆ. ಕಾರಿನಲ್ಲಿ ಮಕ್ಕಳು ಇಲ್ಲದೇ ಇದ್ದಿದ್ದರಿಂದ ಮಹಾ ದುರಂತವೊಂದು ತಪ್ಪಿದೆ.

- Advertisement -

Latest News

error: Content is protected !!