Thursday, May 9, 2024
Homeಕರಾವಳಿಚಿಕ್ಕಮಗಳೂರಿನಲ್ಲಿ ಕಳ್ಳತನವಾದ ಓಮಿನಿ ಉಜಿರೆಯಲ್ಲಿ ಪತ್ತೆ; ಮಾಲೀಕನ ಪ್ರಯತ್ನದಿಂದ 10 ದಿನದಲ್ಲಿ ಕಾರು ಪತ್ತೆ

ಚಿಕ್ಕಮಗಳೂರಿನಲ್ಲಿ ಕಳ್ಳತನವಾದ ಓಮಿನಿ ಉಜಿರೆಯಲ್ಲಿ ಪತ್ತೆ; ಮಾಲೀಕನ ಪ್ರಯತ್ನದಿಂದ 10 ದಿನದಲ್ಲಿ ಕಾರು ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ : ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳ್ಳತನವಾಗಿದ್ದ ಓಮಿನಿ ಕಾರು ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನಲ್ಲಿ ನ.21 ರಂದು ಸಂಜೆ ಪತ್ತೆಯಾಗಿದೆ.

ಬೆಳ್ತಂಗಡಿ ಸಂಚಾರಿ ಪೊಲೀಸರು ಓಮಿನಿ ಕಾರನ್ನು ಚಿಕ್ಕಮಗಳೂರು ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ.ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ KA-05-Z-7189 ಸಂಖ್ಯೆಯ ಓಮಿನಿ ಕಾರನ್ನು ನ.11 ರಂದು ಯರೋ ಕಳ್ಳರು ಕಳ್ಳತನ ಮಾಡಿದ್ದರು.

ಈ ಬಗ್ಗೆ ಕಾರು ಮಾಲೀಕ ವೆಂಕಟೇಶ್ ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಕಾರಿನ ಬಗ್ಗೆ ಮಾಲೀಕ ಸ್ನೇಹಿತರ ಮುಖಾಂತರ ಎಲ್ಲಾ ಕಡೆ ಸಮಾಜಿಕ ಜಾಲತಾಣಗಳಲ್ಲಿ ಕಳ್ಳತನವಾಗಿದ್ದ ಕಾರಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನ.21 ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ಬಳಿಯ ರಸ್ತೆ ಬದಿಯಲ್ಲಿ ಧೂಳು ಹಿಡಿದ ರೀತಿಯಲ್ಲಿ ನಿಲ್ಲಿಸಿದ್ದು ಮಾಲೀಕನ ಸ್ನೇಹಿತರಿಗೆ ಕಂಡಿದ್ದು ತಕ್ಷಣ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಚಿಕ್ಕಮಗಳೂರು ನಗರ ಪೊಲೀಸರಿಗೆ ಮಾಲೀಕ ಮಾಹಿತಿ ನೀಡಿ ನಂತರ ಸ್ಥಳಕ್ಕೆ ಬಂದು ಬೆಳ್ತಂಗಡಿ ಸಂಚಾರಿ ಪೊಲೀಸರ ವಶಕ್ಕೆ ನೀಡಿದ್ದರು.ನಂತರ ಕಾನೂನು ಪ್ರಕ್ರಿಯೆ ಪೂರ್ತಿಗೊಳಿಸಲು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ನ.22 ರಂದು ಮಾಲೀಕ ವೆಂಕಟೇಶ್ ನೀಡಿದ್ದಾರೆ.

ಕಾರು ಕಳ್ಳತನವಾದ ಬಳಿಕ ದೂರು ನೀಡಿ ಮಾಲೀಕನ ಕೆಲಸದ ನಡುವೆಯೂ ಕಠಿಣ ಶ್ರಮದಿಂದ ಗೆಳೆಯರ ಮೂಲಕ 10 ದಿನದಲ್ಲಿ ಓಮಿನಿ ಕಾರನ್ನು ಪತ್ತೆಹಚ್ಚುವಲ್ಲಿ ಸಹಸ ಮೇರೆದಿದ್ದಾರೆ ವೆಂಕಟೇಶ್.

- Advertisement -
spot_img

Latest News

error: Content is protected !!