Thursday, June 4, 2026
Homeಅಪರಾಧಪುತ್ತೂರಿನ ಪಾಟ್ರಕೋಡಿ ಮಿತ್ತಪಡ್ಡುವಿನಲ್ಲಿ ನಗ-ನಗದು ಕಳ್ಳತನ

ಪುತ್ತೂರಿನ ಪಾಟ್ರಕೋಡಿ ಮಿತ್ತಪಡ್ಡುವಿನಲ್ಲಿ ನಗ-ನಗದು ಕಳ್ಳತನ

- Advertisement -
- Advertisement -

ಪುತ್ತೂರು: ಪಾಟ್ರಕೋಡಿ ಮಿತ್ತಪಡ್ಡುವು ಎಂಬಲ್ಲಿ ಕಳ್ಳರು ಎರಡು ಮನೆಗಳಿಗೆ ನುಗ್ಗಿದ್ದು, ನಗ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.

ಮಿತ್ತಪಡ್ಡು ರಮಾಕುಂಞ್ಞ ಅವರ ಮನೆಯಲ್ಲಿ ನಗ ನಗದು ಕಳ್ಳತನವಾಗಿದ್ದು ರಾತ್ರಿ ಯಾರೂ ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಎರಡು ಲಕ್ಷ ರೂ. ಹಾಗೂ ಚಿನ್ನಾಭರಣವನ್ನು ಕಳ್ಳತನಗೈದಿದ್ದಾರೆ ಎನ್ನಲಾಗಿದೆ. ಇನ್ನು ಕಳ್ಳರು ಕೋಡಿ ಅಂಗಡಿ ಯೂಸುಫ್ ಅವರ ಮನೆಯಿಂದ ಆಕ್ಟಿವಾ ದ್ವಿಚಕ್ರ ವಾಹನವನ್ನು ಕಳವು ಗೈದು ಪರಾರಿಯಾಗಿರುತ್ತಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿದ್ದು, ಪ್ರಕರಣದ ಕುರಿತು ದೂರು ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!