- Advertisement -
- Advertisement -
ದೇಶದಲ್ಲಿ ನಿಧಾನವಾಗಿ ಹರಡುತ್ತಿರುವ ಒಮಿಕ್ರಾನ್ ಪ್ರಕರಣ ಉಡುಪಿ ಜಿಲ್ಲೆಗೂ ಒಕ್ಕರಿಸಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ|ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಉಡುಪಿಯ 82 ವರ್ಷದ ಪುರುಷ ಹಾಗೂ 73 ವರ್ಷದ ಮಹಿಳೆಯಲ್ಲಿ ಪ್ರಕರಣ ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಇದಲ್ಲದೆ ರಾಜ್ಯದ ಧಾರವಾಡ ಜಿಲ್ಲೆಯ 54 ವರ್ಷದ ಪುರುಷ, ಭದ್ರಾವತಿಯ 20 ವರ್ಷದ ಯವತಿ ಹಾಗೂ ಮಂಗಳೂರಿನ 19 ವರ್ಷದ ಯುವತಿಯಲ್ಲಿ ಕೂಡ ಒಮಿಕ್ರಾನ್ ಪ್ರಕರಣ ಧೃಢವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ ಒಮಿಕ್ರಾನ್ ಸೋಂಕು ಪೀಡಿತರ ಸಂಖ್ಯೆ 19ಕ್ಕೆ ಏರಿಕೆಯಾದಂತಾಗಿದೆ.
- Advertisement -