Saturday, May 4, 2024
Homeತಾಜಾ ಸುದ್ದಿ67 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ವೃದ್ಧೆಯರು: ಕೊನೆಗೂ ಸಿಕ್ಕಿಬಿದ್ದರು ಖತರ್ನಾಕ್ ಮುದುಕಿಯರು

67 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ವೃದ್ಧೆಯರು: ಕೊನೆಗೂ ಸಿಕ್ಕಿಬಿದ್ದರು ಖತರ್ನಾಕ್ ಮುದುಕಿಯರು

spot_img
- Advertisement -
- Advertisement -

ಪಂಜಾಬ್​ : ನಿಜಕ್ಕೂ ಈ ಸುದ್ದಿಯನ್ನು ಓದಿದ ಬಳಿಕ ನೀವು ಮೂಗಿನ ಮೇಲೆ ಬೆರಳಿಡುತ್ತೀರಾ. ವರ್ಷ 50 ದಾಟಿದ್ರೆ ಸಾಕು ನೆಮ್ಮದಿಯಾಗಿ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳ ಜೊತೆ ಕಾಲ ಕಳೆಯೋಣ ಅಂತಾ ಹೇಳೋ ಮಂದಿಯೇ ಹೆಚ್ಚು.ಆದ್ರೆ ಇಲ್ಲೊಂದು ಕಿಲಾಡಿ ವೃದ್ಧೆಯರ ಜೋಡಿ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ.

ಹೌದು. ಪಂಜಾಬ್ ನ ಚಂಡೀಗಢದಲ್ಲಿ ಸುಮಾರು 67 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 70 ವರ್ಷ ಹಾಗೂ 65 ವರ್ಷದ ವೃದ್ಧೆಯರಿಬ್ಬರನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಅನೇಕ ತಿಂಗಳಿಂದ ಇವರು ಕಳ್ಳತನ, ಸರಗಳ್ಳತನ ಹಾಗೂ ವಂಚನೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಬಂಧಿತರನ್ನು 65 ವರ್ಷದ ಸತ್ಯ ಹಾಗೂ 70 ವರ್ಷದ ಗುರ್ಮೀತೋ ಎಂದು ಗುರುತಿಸಲಾಗಿದೆ.

ಬಂಧಿತರಿಂದ 16 ಗ್ರಾಂ ಚಿನ್ನದ ಬಳೆ ಹಾಗೂ ಇತರೆ ಬೆಳೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರನ್ನು ವಿಚಾರಣೆಗೊಳಪಡಿಸಿದಾಗ ತಾವು ಎಸಗಿರುವ ಕೃತ್ಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ. ಪಂಜಾಬ್​ನ ರಾಜಧಾನಿ ಚಂಡೀಗಢದ ವಿವಿಧ ನಗರಗಳಲ್ಲಿ ಇವರ ವಿರುದ್ಧ ಸರಗಳ್ಳತನ, ವಂಚನೆ ಸೇರಿದಂತೆ 67 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಆರೋಪಿಗಳನ್ನು ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!