Friday, May 3, 2024
Homeತಾಜಾ ಸುದ್ದಿವೃದ್ಧಾಪ್ಯದಲ್ಲಿ ಅಪ್ಪನನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸಿದ ಮಕ್ಕಳು;ತನ್ನ ಆಸ್ತಿಯನ್ನೆಲ್ಲಾ ಸರ್ಕಾರಕ್ಕೆ ನೀಡಿದ ತಂದೆ

ವೃದ್ಧಾಪ್ಯದಲ್ಲಿ ಅಪ್ಪನನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸಿದ ಮಕ್ಕಳು;ತನ್ನ ಆಸ್ತಿಯನ್ನೆಲ್ಲಾ ಸರ್ಕಾರಕ್ಕೆ ನೀಡಿದ ತಂದೆ

spot_img
- Advertisement -
- Advertisement -

ಲಕ್ನೋ: ವೃದ್ಧಾಪ್ಯದಲ್ಲಿ  ಅಪ್ಪನನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸಿದ  ಮಕ್ಕಳಿಗೆ ತಂದೆಯೊಬ್ಬರು ಸರಿಯಾಗಿ ಪಾಠ ಕಲಿಸಿದ್ದಾರೆ. ತಮ್ಮ 1.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಮಾಡಿದ್ದಾರೆ. ನಾಥು ಸಿಂಗ್ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ನೀಡಿದ ವ್ಯಕ್ತಿ.

ಮುಜಾಫರ್‌ನಗರದ ನಿವಾಸಿ ನಾಥು ಸಿಂಗ್ ಅವರು  1.5 ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಜಮೀನನ್ನು ಹೊಂದಿದ್ದಾರೆ. ಅವರಿಗೆ ಒಬ್ಬ ಮಗನಿದ್ದಾನೆ. ಅವನು ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ನಾಲ್ಕು ಹೆಣ್ಣುಮಕ್ಕಳಿದ್ದು ಅವರೆಲ್ಲರ ವಿವಾಹವಾಗಿದೆ.

ಪತ್ನಿಯ ಸಾವಿನ ನಂತರ ವೃದ್ಧ ಒಂಟಿ ಜೀವನ ನಡೆಸುತ್ತಿದ್ದರು. ಸುಮಾರು ಏಳು ತಿಂಗಳ ಹಿಂದೆ ಅವರು ತಮ್ಮ ಗ್ರಾಮದ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿ ವಾಸಿಸುತ್ತಿದ್ದಾರೆ. ಆದರೆ ಆಶ್ರಮಕ್ಕೂ ಯಾರೊಬ್ಬರೂ ತನ್ನನ್ನು ನೋಡಲು ಬರಲಿಲ್ಲ ಎಂದು ಅವರು ನೊಂದುಕೊಂಡಿದ್ದರು. ಹೀಗಾಗಿ ತಮ್ಮ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಿಲ್ ಮಾಡಿದ್ದಾರೆ. ತಮ್ಮ ಮರಣದ ನಂತರ ತನ್ನ ಜಾಗದಲ್ಲಿ ಆಸ್ಪತ್ರೆ ಅಥವಾ ಶಾಲೆಯನ್ನು ನಿರ್ಮಿಸುವಂತೆ ಕೇಳಿಕೊಂಡಿದ್ದಾರೆ.

“ಈ ವಯಸ್ಸಿನಲ್ಲಿ, ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಆದ್ದರಿಂದ ನಾನು ಆಸ್ತಿಯನ್ನು ಸರ್ಕಾರಕ್ಕೆ ವರ್ಗಾಯಿಸಲು ಮನಸ್ಸು ಮಾಡಿದೆ” ಎಂದು ನಾಥು ಸಿಂಗ್‌ ಹೇಳಿದ್ದಾರೆಸಂಶೋಧನೆ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ಬಳಸಲು ತನ್ನ ದೇಹವನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!