Thursday, June 4, 2026
Homeತಾಜಾ ಸುದ್ದಿ"ನನಗೊಂದು ವಧು ಹುಡುಕಿ ಕೊಡಿ ಪ್ಲೀಸ್" : ಸಚಿವೆ ರೋಜಾ ಬಳಿ ಮನವಿ ಮಾಡಿಕೊಂಡ ವೃದ್ಧ

“ನನಗೊಂದು ವಧು ಹುಡುಕಿ ಕೊಡಿ ಪ್ಲೀಸ್” : ಸಚಿವೆ ರೋಜಾ ಬಳಿ ಮನವಿ ಮಾಡಿಕೊಂಡ ವೃದ್ಧ

- Advertisement -
- Advertisement -

ಆಂಧ್ರಪ್ರದೇಶ : ಮದುವೆಯಾಗದ ವೃದ್ಧನೊಬ್ಬ ಸಚಿವರ ಬಳಿ ತನಗೊಂದು ಹುಡುಗಿ ಹುಡುಕಿಕೊಡುವಂತೆ ಸಚಿವರ ಬಳಿ ಅಳಲು ತೋಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಗಡಪದಪಾಕು ಎಂಬಲ್ಲಿ ನಡೆದಿದೆ.

ವೈಸಿಪಿ ಕಾರ್ಯಕ್ರಮದ ಭಾಗವಾಗಿ ಸಚಿವರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ಭಾಗವಾಗಿ, ಸಚಿವೆ ರೋಜಾ ಚಿತ್ತೂರಿನ ನಗರಿಗಳಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಮಾತನಾಡುತ್ತಿದ್ದಾಗ ವಯಸ್ಸಾದ ವ್ಯಕ್ತಿಯ ಈ ವಿಚಿತ್ರ ವಿನಂತಿ ಕೇಳಿ, ಸಚಿವೆ ಆಘಾತಕ್ಕೊಳಗಾಗಿದ್ದಾರೆ.

ಮನೆಯಲ್ಲಿ ಎಲ್ಲರಿಗೂ ಕಲ್ಯಾಣ ಯೋಜನೆಗಳು ಸಿಗುತ್ತಿವೆಯೇ ಎಂದು ಕೇಳುತ್ತಿದ್ದ ಸಚಿವರಿಗೆ ವೃದ್ಧನೊಬ್ಬ ಎದುರಾಗಿದ್ದು, ಆತನಿಗೆ ನಿಮಗೆ ಪಿಂಚಣಿ ಸಿಗ್ತಿದ್ಯಾ? ಅಂತಾ ಸಚಿವರು ಪ್ರಶ್ನಿಸಿದ್ದಾರೆ. ಆಗ ಆ ವ್ಯಕ್ತಿ ಪ್ರತಿ ತಿಂಗಳು ಪಿಂಚಣಿ ಪಡೆಯುವುತ್ತಿರುವುದಾಗಿ ಉತ್ತರಿಸಿದ್ದಾನೆ. ಆದ್ರೆ, ತಾನು ಒಬ್ಬಂಟಿಯಾಗಿರೋದ್ರಿಂದ ತನಗೊಂದು ವಧುವನ್ನ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾನೆ.

ಆಗ ಸಚಿವೆ ರೋಜಾ ನಗುತ್ತಲೇ, ‘ಮದುವೆ ಮಾಡಿಸೋದು ನಾವಲ್ಲ. ನಿಮಗೆ ಪಿಂಚಣಿ ಕೊಡಬೋದು, ಕೊಟ್ಟಿದ್ದೇವೆ. ಇನ್ನೇನು ಬೇಕು?’ ಎಂದಿದ್ದಾರೆ. ಸ್ಥಳೀಯರು ಅದನ್ನ ತೆಗೆದುಕೊಂಡು ನೆಟ್‌ಫ್ಲಿಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ವೀಡಿಯೊ ವೈರಲ್ ಆಗಿದೆ.

- Advertisement -

Latest News

error: Content is protected !!