Sunday, June 30, 2024
Homeಕೊಡಗುಮಡಿಕೇರಿ ರಸ್ತೆಯಲ್ಲಿ ತೈಲ ಸೋರಿಕೆ: ಪಲ್ಟಿಯಾಗ್ತಿವೆ ವಾಹನಗಳು

ಮಡಿಕೇರಿ ರಸ್ತೆಯಲ್ಲಿ ತೈಲ ಸೋರಿಕೆ: ಪಲ್ಟಿಯಾಗ್ತಿವೆ ವಾಹನಗಳು

spot_img
- Advertisement -
- Advertisement -

ಮಡಿಕೇರಿ: ಮಡಿಕೇರಿ‌ – ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆಯಾಗಿದ್ದು ವಾಹನಗಳು ನಿಯಂತ್ರಣ ತಪ್ಪಿ ಚರಂಡಿಗೆ ಉರುಳುತ್ತಿವೆ. ಇಂದು ಬೆಳಗ್ಗಿನಿಂದ ಎರಡು ಬೈಕ್ ಮತ್ತು ಒಂದು ಕಾರು ಪಲ್ಟಿಯಾಗಿವೆ.

ಲಾರಿಯಿಂದ ಈ ತೈಲ ಸೋರಿಕೆಯಾಗಿದ್ದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಜೋಡುಪಾಲದಿಂದ ಮದೆನಾಡುವರೆಗೂ ರಸ್ತೆ ಪೂರ್ತಿ ತೈಲಮಯವಾಗಿದೆ. ಹನಿ ಮಳೆಗೆ ತೈಲ ಮಿಶ್ರಣವಾಗಿ ತಿರುವುಗಳಲ್ಲಿ ವಾಹನಗಳು ಚಾಲಕರ ನಿಯಂತ್ರಣ ತಪ್ಪುತ್ತಿವೆ.

ಸ್ವಲ್ಪ‌ ವೇಗವಾಗಿ ಬಂದು ಬ್ರೇಕ್ ಹಾಕಿದರೂ ವಾಹನಗಳು ಅಪಘಾತವಾಗುತ್ತಿವೆ. ರಸ್ತೆಯಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ.

- Advertisement -
spot_img

Latest News

error: Content is protected !!