Wednesday, June 3, 2026
Homeಕರಾವಳಿಉಡುಪಿಡೆಂಗ್ಯೂ ಜ್ವರಕ್ಕೆ ಉಡುಪಿಯ ನರ್ಸ್ ಬಲಿ

ಡೆಂಗ್ಯೂ ಜ್ವರಕ್ಕೆ ಉಡುಪಿಯ ನರ್ಸ್ ಬಲಿ

- Advertisement -
- Advertisement -

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದ ಬಳಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಯುವತಿಯೋರ್ವರು ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ.

ಬೆಳ್ಮಣ್ ನಿವಾಸಿ ದಿವ್ಯಾ(23) ಮೃತಪಟ್ಟ ದುರ್ದೈವಿ. 15 ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದ ಕಾರಣ ದಿವ್ಯಾ ಅವರನ್ನು ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ದಾಖಲಿಸಲ್ಪಟ್ಟ ಒಂದೇ ಗಂಟೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!