Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವಕೀಲ ಮಂಜುನಾಥ್ ಎನ್ ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ

ಬೆಳ್ತಂಗಡಿ : ವಕೀಲ ಮಂಜುನಾಥ್ ಎನ್ ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ

- Advertisement -
- Advertisement -

ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆಯಾಗಿದ್ದಳು ಎಂದು ಸುಳ್ಳು ದೂರು ನೀಡಿದ್ದ ಸುಜಾತ ಭಟ್ ಪರ ವಕೀಲ ಬೆಂಗಳೂರಿನ ಮಂಜುನಾಥ್ ಎನ್ ಜು‌.30 ರಂದು ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣದ ಸಂಬಂಧ ಪಾಯಿಂಟ್ ಗಳಲ್ಲಿ ಮೃತದೇಹಗಳ ಲೆಕ್ಕವನ್ನು ಪತ್ರಿಕಾ ಹೇಳಿಕೆ ನೀಡಿದ್ದಕ್ಕೆ ಧರ್ಮಸ್ಥಳ ನಿವಾಸಿ ರಾಘುರಾಮ್ ಎಂಬವರು ಆ.22 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿಸಿದ್ದರು.

ಈ ಸಂಬಂಧ ವಕೀಲ ಮಂಜುನಾಥ್ ಎನ್ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಬೆಳ್ತಂಗಡಿ ಪೊಲೀಸರು ಆ.30 ಮತ್ತು 31 ರಂದು ಬೆಂಗಳೂರು ಕಚೇರಿ ಮತ್ತು ನಿವಾಸಕ್ಕೆ ಭೇಟಿ ನೀಡಿದ್ರೂ ಎಲ್ಲೂ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ‌. ಕೊನೆಗೆ ಸೆ.1 ರಂದು ಪೊಲೀಸರನ್ನು ಭೇಟಿ ಮಾಡಿ ಸೆ.7 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದು ಅದನ್ನು ವಕೀಲ ಮಂಜುನಾಥ್ ಎನ್ ಸ್ವೀಕರಿಸಿಕೊಂಡಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!