Thursday, May 2, 2024
Homeಕರಾವಳಿಮಂಗಳೂರು: ನಿರ್ವಹಣೆಯಿಲ್ಲದೆ ಮೂಲೆ ಸೇರಿದ ಇ-ಟಾಯ್ಲೆಟ್‌ !

ಮಂಗಳೂರು: ನಿರ್ವಹಣೆಯಿಲ್ಲದೆ ಮೂಲೆ ಸೇರಿದ ಇ-ಟಾಯ್ಲೆಟ್‌ !

spot_img
- Advertisement -
- Advertisement -

ಈ ಹಿಂದೆ ಇ- ಟಾಯ್ಲೆಟ್‌ ಎಲ್ಲಾ ಕಡೆ ಪ್ರಸಿದ್ಧಿಯಾಗಿತ್ತು. ಕುತೂಹಲ ಕೂಡ ಮೂಡಿಸಿತ್ತು. ಆದರೆ ದಿನ ಕಳೆದಂತೆ ಇಂದು ಮೂಲೆಗುಂಪು ಸೇರಿದೆ. ಯಾರು ಇದನ್ನು ಬಳಸುತ್ತಿಲ್ಲ.

ಕೇರಳ, ಬೆಂಗಳೂರು, ಮೈಸೂರು ಹಾಗೂ ಇತರ ಭಾಗಗಳಲ್ಲಿ ಬಳಕೆಯಲ್ಲಿದ್ದ ಇ-ಟಾಯ್ಲೆಟ್‌ ಪರಿಕಲ್ಪನೆಯನ್ನು ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ 4 ವರ್ಷಗಳ ಹಿಂದೆ ಅನುಷ್ಠಾನಗೊಳಿಸಲಾಗಿತ್ತು. ಆದರೆ ಸ್ವಲ್ಪ ಸಮಯ ಬಳಕೆಯಾದ ಇವು ಸದ್ಯ ನಿರ್ವಹಣೆಯಿಲ್ಲದೆ ಉಪಯೋಗಕ್ಕಿಲ್ಲವಾಗಿದೆ.

ಲಾಲ್‌ಬಾಗ್‌, ಎಕ್ಕೂರಿನ ಪಕ್ಕಲಡ್ಕ, ಕದ್ರಿ ಪಾರ್ಕ್‌, ಸಹಿತ ವಿವಿಧ ಕಡೆಗಳಲ್ಲಿ ಇರುವ ಇ-ಟಾಯ್ಲೆಟ್‌ ಈಗ ಪೂರ್ಣವಾಗಿ ಬಳಕೆಯಾಗುತ್ತಿಲ್ಲ.ಹಾಗೇ ಪುರಭವನ ಮುಂಭಾಗದಿಂದ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಇ – ಟಾಯ್ಲೆಟ್‌ ತ್ಯಾಜ್ಯ ರಾಶಿಯ ಮಧ್ಯೆಯಿದೆ. ಇದರ ಕುರಿತು ಕ್ರಮ ಕೈಗೊಳ್ಳಬೇಕು.

- Advertisement -
spot_img

Latest News

error: Content is protected !!