Sunday, June 29, 2025
Homeಕರಾವಳಿಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಬಳಿ ಸ್ಯಾಟಲೈಟ್ ಫೋನ್ ಕರೆ ಪತ್ತೆ ಬಗ್ಗೆ ಮಾಹಿತಿ ಇಲ್ಲ: ದ.ಕ....

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಬಳಿ ಸ್ಯಾಟಲೈಟ್ ಫೋನ್ ಕರೆ ಪತ್ತೆ ಬಗ್ಗೆ ಮಾಹಿತಿ ಇಲ್ಲ: ದ.ಕ. ಎಸ್ಪಿ ಋಷಿಕೇಶ್ ಸೋನಾವಣೆ ಸ್ಪಷ್ಟನೆ

spot_img
- Advertisement -
- Advertisement -

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಭಾಗದಲ್ಲಿ ಯಾವುದೇ ಸ್ಯಾಟಲೈಟ್ ಕರೆಗಳು ಪತ್ತೆಯಾದ ಬಗ್ಗೆ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ.

ಚಾರ್ಮಾಡಿ ಘಾಟ್ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ಅನುಮಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ಪಿ, ಧರ್ಮಸ್ಥಳ ಠಾಣೆಯ ಪೊಲೀಸರು ಸುತ್ತಮುತ್ತ ಪರಿಶೀಲನೆ ನಡೆಸಿದ್ದು ಸ್ಯಾಟಲೈಟ್ ಫೋನ್ ಹೋಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೇ ಸ್ಥಳೀಯ ಗ್ರಾಮಸ್ಥರು ಕಾಡು ಪ್ರಾಣಿಗಳನ್ನು ಓಡಿಸಲು ಹೆಚ್ಚಾಗಿ ಪಟಾಕಿ ಹೊಡೆಯುತ್ತಿದ್ದು, ಪಟಾಕಿ ಆಗಿರಬಹುದೇ ಹೊರತು ಯಾವುದೇ ಟ್ರಯಲ್ ಬ್ಲಾಸ್ಟ್ ‌ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ಸ್ಫೋಟದ ರೀತಿ ಸದ್ದು ಕೇಳಿ ಬಂದ ಬಗ್ಗೆ ಮಾಹಿತಿಯನ್ನು ಸ್ಥಳೀಯರು ಬಹಿರಂಗಪಡಿಸಿದ್ದರು.

- Advertisement -
spot_img

Latest News

error: Content is protected !!