- Advertisement -
- Advertisement -
ಉಡುಪಿ : ಸಾರ್ವಜನಿಕ ಸ್ಥಳಗಳಲ್ಲಿ ಗೌರವ ವಂದನೆ (ಗಾರ್ಡ್ ಆಫ್ ಆನರ್) ಸಲ್ಲಿಕೆ ನಿಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸಿಎಂ ಸೂಚನೆ ನೀಡಿದ್ದು,ಈ ಮೂಲಕ ಗೌರವ ವಂದನೆಯಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿದಂತಾಗಿದೆ.
ಗುರುವಾರ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಮಂಗಳೂರಿನಲ್ಲಿ ಮುಖ್ಯಮಂತ್ರಿಗೆ ಗೌರವ ವಂದನೆ ನೀಡಲು ಮೊದಲೇ ಸರ್ವ ಸಿದ್ಧತೆ ಮಾಡಿಕೊಂಡಿದ್ದರಿಂದ ಅದನ್ನು ಸ್ವೀಕಾರ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣ, ರೈಲು- ಬಸ್ ನಿಲ್ದಾಣಗಳಲ್ಲಿ ಗೌರವ ವಂದನೆ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ಬೆಂಗಳೂರಿಗೆ ವಾಪಸಾದ ಕೂಡಲೇ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು ಹಾಗೂ ಪೊಲೀಸ್ ಸಮಾರಂಭದಲ್ಲಿ ಮಾತ್ರ ಗೌರವ ವಂದನೆ ಕೊಟ್ಟರೆ ಸಾಕು ಎಂದು ಹೇಳಿದ್ದಾರೆ.
- Advertisement -