Wednesday, June 3, 2026
Homeಕರಾವಳಿಬಪ್ಪನಾಡು ಜಾತ್ರೋತ್ಸವದಲ್ಲಿ ಅಂಗಡಿ ಹಾಕದ ಮುಸ್ಲಿಂ ವರ್ತಕರು

ಬಪ್ಪನಾಡು ಜಾತ್ರೋತ್ಸವದಲ್ಲಿ ಅಂಗಡಿ ಹಾಕದ ಮುಸ್ಲಿಂ ವರ್ತಕರು

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದ ಬಗ್ಗೆ ದಿನಕ್ಕೊಂದು ರೀತಿ ಬೆಳವಣಿಗೆಗಳು ಆಗುತ್ತಿರುವಾಗಲೇ  ಬಪ್ಪನಾಡು ಜಾತ್ರೋತ್ಸವದಲ್ಲಿ ಮುಸ್ಲಿಂ ವರ್ತಕರು ಅಂಗಡಿ ಹಾಕಿಲ್ಲ. ಇಂದಿನಿಂದ ಜಾತ್ರೋತ್ಸವ ಆರಂಭವಾಗಿದ್ದು, ಮಧ್ಯಾಹ್ನ ದೇವರ ಹಗಲು ರಥೋತ್ಸವ ನಡೆದಿದೆ. ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ಹಿನ್ನಲೆ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕರಾವಳಿಯಲ್ಲಿ ಹಿಜಾಬ್ ವಿವಾದದ ಬಳಿಕ ಪ್ರಾರಂಭವಾದ ಹಿಂದೂ ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಂರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಅಭಿಯಾನ ಮುಂದುವರೆದಿದೆ. ಇತಿಹಾಸ ಪ್ರಸಿದ್ದ ಬಪ್ಪನಾಡು ಕ್ಷೇತ್ರದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸುವ ಬ್ಯಾನರ್ ಹಾಕಲಾಗಿದೆ.

ಜಾತ್ರೆಯಲ್ಲಿ ವ್ಯಾಪಾರ ಮಳಿಗೆಗಾಗಿ ಸುಮಾರ 80 ಕ್ಕೂ ಅಧಿಕ ಮಂದಿ ಮುಸ್ಲಿಂ ವ್ಯಾಪಾರಸ್ಥರು ನೊಂದಾಯಿಸಿದ್ದರು, ಆದರೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಯಾರೂ ಕೂಡ ಮಳಿಗೆಯನ್ನು ಓಪನ್ ಮಾಡಿಲ್ಲ.

- Advertisement -

Latest News

error: Content is protected !!