Saturday, October 17, 2026
Homeತಾಜಾ ಸುದ್ದಿಹಂಪಿಯಲ್ಲಿ ಯಾವುದೇ ರೀತಿಯ ಭೂಕಂಪ ಸಂಭವಿಸಿಲ್ಲ: ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಸ್ಪಷ್ಟನೆ

ಹಂಪಿಯಲ್ಲಿ ಯಾವುದೇ ರೀತಿಯ ಭೂಕಂಪ ಸಂಭವಿಸಿಲ್ಲ: ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಸ್ಪಷ್ಟನೆ

- Advertisement -
- Advertisement -

ಬೆಂಗಳೂರು: ಹಂಪಿಯಲ್ಲಿ ಇಂದು ಭೂಕಂಪ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಸ್ಪಷ್ಟಪಡಿಸಿದ್ದಾರೆ.

ಇಂದು ಮುಂಜಾನೆ 6.55ರ ಸುಮಾರಿಗೆ ಪಾರಂಪರಿಕ ತಾಣ ಹಂಪಿಯಲ್ಲಿ ಲಘು ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.0ರಷ್ಟು ಇತ್ತು ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದು ನಿಜವಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಹಂಪಿಯ ಪೂರ್ವಭಾಗದಿಂದ 181 ಕಿ.ಮೀ ದೂರದಲ್ಲಿನ ಒಂದು ಪ್ರದೇಶದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಅದರ ಪ್ರಭಾವ ಹಂಪಿಯಲ್ಲಿ ದಾಖಲಾಗಿದೆ ಅಷ್ಟೇ” ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿತ್ತು.

- Advertisement -

Latest News

error: Content is protected !!