Wednesday, May 8, 2024
Homeತಾಜಾ ಸುದ್ದಿಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ

ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ

spot_img
- Advertisement -
- Advertisement -

ಬೆಂಗಳೂರು: ಶಾಲಾ ಪಠ್ಯಪುಸ್ತಕರ ಪರಿಷ್ಕರಣೆ ವಿವಾದದ ಬಳಿಕ, ಇದೀಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ, ಈ ಹಿಂದಿನ ಪಠ್ಯಪುಸ್ತಕವೇ ಯಥಾವತ್ತಾಗಿ ಇರಲಿದೆ ಎಂಬುದಾಗಿ ಸಚಿವ ಬಿ.ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಿಯು ಪಠ್ಯಪುಸ್ತಕ ಯಥಾವತ್ತಾಗಿ ಇರಲಿದೆ. ಪರಿಷ್ಕರಣೆ ಮಾಡಲ್ಲ. ಈಗ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಲಾಗಿದೆ. ಅದ್ದರಿಂದ ಈ ಸಮಿತಿಯಿಂದ ಪರಿಷ್ಕರಣೆ ಮಾಡಿಸುವುದಿಲ್ಲ ಎಂದಿದ್ದಾರೆ.

ಶಾಲಾ ಪಠ್ಯಪುಸ್ತಕ ಕುರಿತಂತೆ ಬರಗೂರು ಸಮಿತಿ ನೀಡಿದ್ದ ಬಸವಣ್ಣ ಪಠ್ಯವನ್ನು ಶಾಲಾ ಪಠ್ಯಗಳಲ್ಲಿ ಮುಂದುವರೆಸಲಾಗುತ್ತದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಲೋಪಗಳನ್ನು ಸರಿ ಪಡಿಸಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದರು.

- Advertisement -
spot_img

Latest News

error: Content is protected !!