ಬೆಳ್ತಂಗಡಿ : ಉಜಿರೆ ಭಾಸ್ಕರ್ ನಾಯ್ಕ್ ಮೇಲೆ ತಿಮರೋಡಿ ಮಹೇಶ್ ಶೆಟ್ಟಿ ತಂಡದಿಂದ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು. ಆರೋಪಿಗಳ ಬಂಧನವಾಗದ ಕಾರಣ ಹಲ್ಲೆಗೊಳಾಗದ ಭಾಸ್ಕರ್ ನಾಯ್ಕ್ ಸಪ್ಟೆಂಬರ್ 11 ರಂದು ಹೈ ಕೋರ್ಟ್ ಗೆ ಮೊರೆ ಹೋಗಿದ್ದರು. ಇದರ ಬಗ್ಗೆ ಸ.12 ರಂದು ನ್ಯಾಯಧೀಶರು ಸಪ್ಟೆಂಬರ್ 15 ಕ್ಕೆ ಪ್ರಕರಣದ ಬಗ್ಗೆ ವರದಿ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಕರಣದ ಆರೋಪಿಯೊಬ್ಬನನ್ನು ತಿಮರೋಡಿ ಮಹೇಶ್ ಶೆಟ್ಟಿ ತಂಡದಿಂದ ಬಂಟ್ವಾಳ ಡಿವೈಎಸ್ಪಿ ಗೆ ಶರಣಾಗತಿ ಮಾಡಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಪ್ಟೆಂಬರ್ 3 ರಂದು ಪ್ರಕರಣ ನಡೆದ ಬಳಿಕ ಯಾರನ್ನು ಕೂಡ ಪೊಲೀಸರು ಬಂಧಿಸದೆ ಸುಮ್ಮನಿದ್ದರು ಹೈಕೋರ್ಟ್ ಮೊರೆ ಹೋದ ಬಳಿಕ ಎಚ್ಚೆತ್ತ ಪೊಲೀಸರು ಅಲರ್ಟ್ ಅಗಿ ಶರಣಾಗತಿ ಮಾಡಲು ಸರ್ಕಸ್ ಮಾಡುತ್ತಿದ್ದ ಬೆನ್ನಲ್ಲೇ ಪ್ರಕರಣದ ಐದನೇ ಆರೋಪಿಯಾಗಿರುವ ನಿತೀನ್ ಪೂಜಾರಿ ಯಾನೆ ನೀತು ತನ್ನ ಪತ್ನಿ ಮನೆ ಸಕಲೇಶಪುರದಲ್ಲಿ ಅವಿತು ಕುಳಿತಿದ್ದ. ಹೈಕೋರ್ಟ್ ವರದಿ ಬೆನ್ನಲ್ಲೇ ತಿಮರೋಡಿ ತಂಡ ನಿತಿನ್ ನನ್ನು ಬಂಟ್ವಾಳಕ್ಕೆ ಡಿವೈಎಸ್ಪಿ ಠಾಣೆಗೆ ಶರಣಾಗಲು ಸೂಚಿಸಿದ್ದಕ್ಕಾಗಿ ಸಪ್ಟೆಂಬರ್ 14 ರಂದು ರಾತ್ರಿ ಶರಣಾಗತಿ ಮಾಡಿದೆ. ಇಂದು ಹೈಕೋರ್ಟ್ ಗೆ ಒಬ್ಬನನ್ನು ಬಂಧಿಸಿರುವ ಕುರಿತು ವರದಿಯನ್ನು ಪೊಲೀಸ್ ಇಲಾಖೆ ನೀಡಿದೆ ಎನ್ನಲಾಗಿದೆ.