Thursday, June 13, 2024
Homeಮನರಂಜನೆಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ನಿತಿನ್ ಗೋಪಿ ನಿಧನ

ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ನಿತಿನ್ ಗೋಪಿ ನಿಧನ

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ನಿತಿನ್ ಗೋಪಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಂತ ನಟ ನಿರ್ದೇಶಕ ನಿತಿನ್ ಗೋಪಿ ಅವರಿಗೆ ನಿನ್ನೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಆದ್ರೇ ಮಾರ್ಗ ಮಧ್ಯೆ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದು ಬಂದಿದೆ.ಅಂದಹಾಗೇ, ಬಾಲ ನಟನಾಗಿ ಚೆಂದನವನದಲ್ಲಿ ಸಿನಿ ಪ್ರಿಯರನ್ನು ರಂಜಿಸಿದ್ದವರು, ಈ ಮೂಲಕ ಹೆಚ್ಚು ಪರಿಚಿತರಾಗಿದ್ದವರು ನಿತಿನ್ ಗೋಪಿ. ಇವರು ವಿಷ್ಣುವರ್ಧನ್ ಜೊತೆಗೆ ಹಲೋ ಡ್ಯಾಡಿ ಚಿತ್ರದಲ್ಲಿ ಅವರ ಮಗನಾಗಿ ಕಾಣಿಸಿಕೊಂಡಿದ್ದರು.

ಹಲೋ ಡ್ಯಾಡಿ ಸಿನಿಮಾದಲ್ಲಿ ಶಾಲೆಗೆ ಈ ದಿನ ರಜಾ ಹಾಡಿನಲ್ಲಿ ಸಿನಿ ಪ್ರೇಕ್ಷಕರನ್ನು ರಂಜಿಸಿ, ಮನಸ್ಸಿನಲ್ಲಿ ಉಳಿದಿದ್ದರು. ಆ ಹಾಡು ಈಗಲೂ ಸಿನಿ ರಸಿಕರ ಮನದಲ್ಲಿದೆ. ಹಲೋ ಡ್ಯಾಡಿ ಅಲ್ಲದೇ ಮುತ್ತಿನಂತ ಹೆಂಡತಿ, ಚಿರ ಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಿತಿನ್ ಗೋಪಿ ಬಾಲ ನಟನಾಗಿ ಅಭಿನಯಿಸಿದ್ದಾರೆ.

ಹರ ಹರ ಮಹದೇವ ಧಾರವಾಹಿ ಸೇರಿದಂತೆ ಇತರೆ ಧಾರವಾಹಿಗಳನ್ನು ನಿರ್ದೇಶಿಸಿದ್ದಂತ ಅವರು, ಹೊಸ ಧಾರವಾಹಿಯೊಂದರ ನಿರ್ದೇಶನಕ್ಕೂ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!