Friday, September 29, 2023
Homeಕರಾವಳಿಬಂಟ್ವಾಳ; ಪತಿಗೆ ತಿಳಿಯದಂತೆ ಎರಡನೇ ವಿವಾಹದ ಪತ್ನಿ; ಕೋರ್ಟ್ ಮೊರೆ ಹೋದ  ಗಂಡ

ಬಂಟ್ವಾಳ; ಪತಿಗೆ ತಿಳಿಯದಂತೆ ಎರಡನೇ ವಿವಾಹದ ಪತ್ನಿ; ಕೋರ್ಟ್ ಮೊರೆ ಹೋದ  ಗಂಡ

- Advertisement -
- Advertisement -

ಬಂಟ್ವಾಳ: ಪತಿಗೆ ತಿಳಿಯದಂತೆ ಎರಡನೇ ವಿವಾಹವಾದ ಪತ್ನಿ ವಿರುದ್ಧ ಗಂಡ ಕೋರ್ಟ್ ಮೊರೆ ಹೋದ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ,

ಇಲ್ಲಿನ ಪಣಕಜೆಯ ಮಂಡಾಡಿ ನಿವಾಸಿ ಉದಯ ನಾಯಕ್ ಅವರು ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದು, ಬೆಳ್ತಂಗಡಿ ಸಿಜೆ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಆದೇಶಿಸಿದೆ.

4 2018ರಲ್ಲಿ ಉದಯ ನಾಯಕ್ ಅವರು ಅನಿತಾ ನಾಯಕ್ ಎಂಬುವವರನ್ನು ಮದುವೆಯಾಗಿದ್ದು, ಮದುವೆ ಬಳಿಕ ಜೂನ್ 2020ರ ತನಕ ಇಬ್ಬರೂ ಒಟ್ಟಿಗೆ ಇದ್ದರು.ಇದಾದ ಬಳಿಕ‌ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಉದಯ ನಾಯಕ್ ಡೈವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು.ಈ ಪ್ರಕರಣವು ವಿಚಾರಣೆಯಲ್ಲಿರುವಾಗಲೇ ಅನಿತಾ ಅವರು ಹರಿಕೃಷ್ಣ ಗಣಪತ್ ರಾವ್ ಎಂಬವರ ಜತೆ ವಿವಾಹವಾಗಿರುವುದಾಗಿ ಉದಯ ನಾಯಕ್ ಆರೋಪಿಸಿದ್ದಾರೆ.

ಈ ಮದುವೆಯು ಕಾನೂನು ಬಾಹಿರವಾಗಿದ್ದರಿಂದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿದ್ದಾರೆ.ಈ ಕುರಿತು ಪುಂಜಾಲಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!