Friday, May 3, 2024
Homeಕರಾವಳಿಕರಾವಳಿ ಮೇಲೆ ಎನ್‌ಐಎ ನಿರಂತರ ಹದ್ದಿನ ಕಣ್ಣು!

ಕರಾವಳಿ ಮೇಲೆ ಎನ್‌ಐಎ ನಿರಂತರ ಹದ್ದಿನ ಕಣ್ಣು!

spot_img
- Advertisement -
- Advertisement -

ಮಂಗಳೂರು: ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಎನ್‌ಐಎ ನಿರಂತರವೆಂಬಂತೆ ಕಣ್ಣಿಡುವಂತಾಗಿದೆ.

ಇದಕ್ಕೆ ಮುಖ್ಯ ಕಾರಣ ನಾಲೈದು ವರ್ಷಗಳಿಂದ ಹೊರ ರಾಜ್ಯಗಳಲ್ಲಿ ನಡೆದ ಭಯೋತ್ಪಾದನ ಕೃತ್ಯ. ಐಸಿಸ್ ನೆಟ್‌ವರ್ಕ್‌ಗೆ ಸಂಬಂಧಿಸಿ ಎನ್‌ಐಎ ಹಲವು ಬಾರಿ ದ.ಕ. ಜಿಲ್ಲೆಯಲ್ಲಿ ದಾಳಿ ನಡೆಸಿದೆ. ಇದುವರೆಗೂ 15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದೆ. ಹಲವರ ದೋಷಾರೋಪಣ ಪಟ್ಟಿ ಕೂಡ ಸಲ್ಲಿಕೆಯಾಗಿದೆ.

ಎನ್‌ಐಎ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆಗೆ ಪುಷ್ಟಿ ನೀಡುವಂತೆ ಪದೇಪದೆ ಎನ್‌ಐಎ ದ.ಕ. ಜಿಲ್ಲೆಯಲ್ಲಿ ಶೋಧ ನಡೆಸುವ ಸ್ಥಿತಿ ಉಂಟಾಗುತ್ತಿದೆ. ಕೆಲವೊಮ್ಮೆ ಭಾರೀ ಪ್ರತಿರೋಧದ ನಡುವೆ ಪೊಲೀಸ್ ಭದ್ರತೆಯೊಂದಿಗೆ ಶೋಧ ಕೂಡ ನಡೆಸಿತ್ತು. ಬೆಂಗಳೂರು ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೆ ಎನ್‌ಐಎ ಕಣ್ಣು ಕರಾವಳಿ ಮೇಲೆ ಬಿದ್ದಿದೆ. ಮಂಗಳವಾರ ದ.ಕ ಜಿಲ್ಲೆಯ ಎರಡು ಕಡೆ ಶೋಧ ನಡೆಸಿದೆ. ಮಂಗಳೂರಿನ ಅತ್ತಾವರದ ನಾವಿದ್ ಎಂಬಾತನ ಮನೆಯನ್ನೂ ಶೋಧಿಸಿದೆ.

- Advertisement -
spot_img

Latest News

error: Content is protected !!