Wednesday, June 24, 2026
Homeಕರಾವಳಿಬಂಟ್ವಾಳದ ಎರಡು ಮನೆಗಳು ಸೇರಿದಂತೆ ದ.ಕ.ಜಿಲ್ಲೆಯಲ್ಲಿ 5 ಕಡೆ ಎನ್ ಐ ಎ ದಾಳಿ

ಬಂಟ್ವಾಳದ ಎರಡು ಮನೆಗಳು ಸೇರಿದಂತೆ ದ.ಕ.ಜಿಲ್ಲೆಯಲ್ಲಿ 5 ಕಡೆ ಎನ್ ಐ ಎ ದಾಳಿ

- Advertisement -
- Advertisement -

ಬಂಟ್ವಾಳ : ಬಂಟ್ವಾಳದ ಎರಡು ಮನೆಗಳು ಸೇರಿದಂತೆ ದ.ಕ.ಜಿಲ್ಲೆಯಲ್ಲಿ 5 ಕಡೆ ಎನ್ ಐ ಎ ದಾಳಿ ಮಾಡಿದೆ. ಹೈದರಾಬಾದ್ ನಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎನ್‌ಐಎ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಬಂಟ್ವಾಳ ತಾಲೂಕಿನ ಬೋಗೊಡಿ ನಿವಾಸಿ ಇಬ್ರಾಹಿಂ ನಂದಾವರ ಹಾಗೂ ಕುಂಪಣಮಜಲು ನಿವಾಸಿಯಾಗಿದ್ದ ಪ್ರಸ್ತುತ ವಳಚ್ಚಿಲ್ ನಿವಾಸಿಯಾಗಿರುವ ಮುಸ್ತಾಕ್ ಎಂಬವರ ಮನೆಗೆ ದಾಳಿ ನಡೆಸಿದ ಎನ್‌ಐಎ ಪೋಲೀಸರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!