Thursday, May 16, 2024
Homeಕರಾವಳಿಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ:ಸುಳ್ಯ ಮತ್ತು ಪುತ್ತೂರಿನಲ್ಲಿ 32 ಕಡೆಗಳಲಲ್ಲಿ ಎನ್ ಐಎ ದಾಳಿ

ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ:ಸುಳ್ಯ ಮತ್ತು ಪುತ್ತೂರಿನಲ್ಲಿ 32 ಕಡೆಗಳಲಲ್ಲಿ ಎನ್ ಐಎ ದಾಳಿ

spot_img
- Advertisement -
- Advertisement -

ಸುಳ್ಯ: ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಮತ್ತು ಸುಳ್ಯ ತಾಲೂಕಿನ ಹಲವಡೆ ಎನ್ ಐಎ ದಾಳಿ ನಡೆದಿದೆ.

ಪುತ್ತೂರು ಮತ್ತು ಸುಳ್ಯದ 32 ಸ್ಥಳಗಳಲ್ಲಿ ಮನೆ ಹಾಗೂ ಕೆಲವು ಖಾಸಗಿ ಕಟ್ಟಡಗಳ ಮೇಲೆ ರಾಷ್ಟ್ರೀಯ ತನಿಖಾ‌ ದಳ ದಾಳಿ‌ ನಡೆಸಿದೆ. ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆ ನಡೆಸಲಾಗಿದ್ದು, ಎನ್ಐಎ ತಂಡಕ್ಕೆ ರಾಜ್ಯ ಪೊಲೀಸರು ಸಹಕಾರ ನೀಡಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಮನೆ ಮತ್ತು ಎಸ್.ಡಿ.ಪಿ.ಐ ಮುಖಂಡ ಜಾವೇದ್ ಹರಿಯಡ್ಕ ಕುಂಬ್ರ, ಇಕ್ಬಾಲ್ ಬೆಳ್ಳಾರೆ (ಶಾಫಿ ಬೆಳ್ಳಾರೆ ತಮ್ಮ) ಹಾಗೂ  ಎಸ್.ಡಿ.ಪಿ.ಐ ಕಾರ್ಯಕರ್ತರ ಮನೆಗಳು, ಪುತ್ತೂರು ತಾಲೂಕಿನ ಮಿತ್ತೂರಿನ ಎಸ್.ಡಿ.ಪಿ.ಐ ಗೆ ಸೇರಿದ ಫ್ರೀಡಮ್‌ ಕಮೂನಿಟಿ ಹಾಲ್ ಸೇರಿ 32 ಕಡೆಗಳಲ್ಲಿ ದಾಳಿ ನಡೆದಿದೆ.

ವಿಟ್ಲದ ಮಿತ್ತೂರಿನ ಎಸ್.ಡಿ.ಪಿ.ಐ ಗೆ ಸೇರಿದ ಫ್ರೀಡಮ್‌ ಕಮೂನಿಟಿನಲ್ಲಿ ಎಸ್.ಡಿ.ಪಿ.ಐ ಗೆ ಸೇರಿದ ಎಲ್ಲಾ ಕಾರ್ಯಕ್ರಮಗಳು ಮಾತ್ರ ನಡೆಯುತ್ತಿತ್ತು. ಇಲ್ಲಿ ಬೇರೆ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ.

ಉಪ್ಪಿನಂಗಡಿಯಲ್ಲಿರುವ SDPI ಮುಖಂಡ ಮಸೂದ್ ಅಗ್ನಾಡಿ ಮನೆಗೆ ದಾಳಿ( ವಕೀಲ ಅಶ್ರಫ್ ಅಗ್ನಾಡಿಯ ತಮ್ಮ) ಮತ್ತು ಪ್ರವೀಣ್ ನೆಟ್ಟಾರು ಹತ್ಯೆಯಾದ ಬಳಿಕ ಆರೋಪಿಗಳು ತುಫೇಲ್ ಎಂಬವನ ಮನೆಯಾದ ಮಡಿಕೇರಿಯಲ್ಲಿ ಆಶ್ರಯ ಪಡೆದಿದ್ದರು ಅಲ್ಲಿಯೂ ದಾಳಿ ನಡೆದಿದೆ.

ಜುಲೈ‌ 26 ರ ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ‌ನೆಟ್ಟಾರು ಹತ್ಯೆ ನಡೆದಿತ್ತು.ರಾಜ್ಯಾದ್ಯಂತ ತೀವ್ರ ಸದ್ದು ಮಾಡಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ ಐಎ ತನಿಖೆಗೆ ಶಿಫಾರಸು ಮಾಡಿತ್ತು.

- Advertisement -
spot_img

Latest News

error: Content is protected !!