- Advertisement -
- Advertisement -
ಶಿವಮೊಗ್ಗ: ಹುಣಸೋಡು ಗ್ರಾಮದ ಕಲ್ಲು ಕ್ವಾರೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆಂಬುಲೆನ್ಸ್ ಚಾಲಕ ಇಲ್ಲಿನ ಶವಗಳನ್ನು ಸಾಗಿಸಿದ್ದು ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸ್ಪೋಟದ ತೀವ್ರತೆ ಎಷ್ಟಿತ್ತು ಎಂಬುದನ್ನು ಶವಗಳ ಹುಡುಕಾಟದಲ್ಲಿ ತೊಡಗಿದ್ದ ಅವರು ತಿಳಿಸಿದ್ದಾರೆ.
ಘಟನೆ ನಡೆದ ರಾತ್ರಿ ಸ್ಪೋಟದ ಸ್ಥಳಕ್ಕೆ ಯಾರನ್ನೂ ಬಿಟ್ಟಿರಲಿಲ್ಲ. ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಛಿದ್ರವಾಗಿದ್ದ ಎರಡು ಮೃತದೇಹ ಕಂಡು ಬಂದಿದ್ದವು. ದೇಹದ ವಿವಿಧ ಭಾಗಗಳು ಅಲ್ಲಲ್ಲಿ ಛಿದ್ರವಾಗಿ ಬಿದ್ದಿದ್ದವು. ದೂರದಲ್ಲಿದ್ದ ಮೃತದೇಹಗಳನ್ನು ತೆಗೆದುಕೊಂಡು ಶವಾಗಾರಕ್ಕೆ ಸಾಗಿಸಲಾಗಿತ್ತು ಆದರೆ ಹಗಲು ಪರಿಶೀಲನೆ ನಡೆಸಿದಾಗ ಕೈ, ಕಾಲು ಸೇರಿ ದೇಹದ ಭಾಗಗಳು ಛಿದ್ರವಾಗಿ ಬಿದ್ದಿದ್ದು, ಅದೆಲ್ಲವನ್ನು ಚೀಲದಲ್ಲಿ ಸಂಗ್ರಹಿಸಿಕೊಂಡು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿತ್ತು ಎಂದು ಆತ ಮಾಹಿತಿ ಹಂಚಿಕೊಂಡಿದ್ದಾರೆ.
- Advertisement -