Friday, May 17, 2024
Homeತಾಜಾ ಸುದ್ದಿಒಬ್ಬೊಬ್ಬರಲ್ಲಿ ಒಂದೊಂದು ರೀತಿ ಕಾಣಿಸಿಕೊಳ್ತಿದೆ ಕೊರೊನಾ ಲಕ್ಷಣ.. ಕೆಲವರಿಗೆ ಹಸಿವೆಯಿಲ್ಲ, ಇನ್ನೂ ಕೆಲವರಿಗೆ ವಾಸನೆ ಗೊತ್ತಾಗಿಲ್ಲ..

ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಕಾಣಿಸಿಕೊಳ್ತಿದೆ ಕೊರೊನಾ ಲಕ್ಷಣ.. ಕೆಲವರಿಗೆ ಹಸಿವೆಯಿಲ್ಲ, ಇನ್ನೂ ಕೆಲವರಿಗೆ ವಾಸನೆ ಗೊತ್ತಾಗಿಲ್ಲ..

spot_img
- Advertisement -
- Advertisement -

ಬೆಂಗಳೂರು : ಯಾವುದೇ ಸುಳಿವು ನೀಡದೇ ಸಿಕ್ಕ ಸಿಕ್ಕವರ ಮೇಲೆ ಅಟ್ಯಾಕ್ಟ್ ಮಾಡುತ್ತಿದೆ ಡೆಡ್ಲಿ ಕೊರೊನಾ. ಆರಂಭದಲ್ಲಿ ಕೆಮ್ಮು, ನೆಗಡಿ, ಜ್ವರ ಇವೇ ಕೊರೊನಾ ಲಕ್ಷಣಗಳು ಅಂತ ಪರಿಗಣಿಸಲಾಗ್ತಿತ್ತು. ಆದರೆ ಹೋಗ್ತಾ ಹೋಗ್ತಾ ಇದೀಗ ದಿನ ಕಳೆದಂತೆ ಕೊರೊನಾದ ಲಕ್ಷಣಗಳೇ ಬದಲಾಗುತ್ತಿದೆ. ಕೆಲವರಿಗಷ್ಟೇ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡ್ರೆ ಇನ್ನೂ ಕೆಲವರಿಗೆ ಆರೋಗ್ಯದಲ್ಲಿ ಒಂದು ಚಿಕ್ಕ ಬದಲಾವಣೆ ತೋರಿಸಿದೇ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿರೋದು ಆತಂಕಕ್ಕೆ ಕಾರಣಾಗ್ತಿದೆ.

 ಒಂದಷ್ಟು ಕೊರೊನಾ ಸೋಂಕಿತರು ಹೇಳುವ ಪ್ರಕಾರ ಅವರಿಗೆ ಕೊರೊನಾದ ಯಾವುದೇ ಲಕ್ಷಣಗಳೇ ಇರಲಿಲ್ಲವಂತೆ.ಆದರೆ  ಇದಕ್ಕಿದ್ದಂತೆ  ವಾಸನೆ ಗ್ರಹಿಸೋದು ಅಸಾಧ್ಯವಾದಾಗ ಯಾವುದಕ್ಕೂ ಇರಲಿ ಅಂತಾ ಕೋವಿಡ್ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರೋದು ಗೊತ್ತಾಯಂತೆ. ಇನ್ನು ಕೆಲವರು ಹೇಳೋ ಪ್ರಕಾರ ಹಸಿವೆಯೇ ಇಲ್ಲವಂತೆ. ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್.

ಸರಿ. ಈ ರೀತಿಯ ಏನಾದರೂ ವ್ಯತ್ಯಾಸಗಳು ಕಂಡು ಬಂದಾಗ ಪರೀಕ್ಷೆ ನಡೆಸಬಹುದು. ಆದರೆ ಕೆಲವೊಬ್ಬರಿಗೆ ಯಾವುದೇ ಸಿಂಟಮ್ಸ್ ಇಲ್ಲದೇ ಪಾಸಿಟಿವ್ ಬರ್ತಿರೋದು ಭಯ ಮೂಡಿಸಿದೆ. ನಮಗೆ ಅರಿವಿಲ್ಲದಂತೆ ಬೇರೆಯವರಿಗೆ ನಮ್ಮಿಂದ ಹರಿಡಿದರೆ ಹೇಗೆ ಅನ್ನೋ ಆತಂಕ ಸಹಜ ಅಲ್ವಾ? ಹಾಗಾಗಿ ಆದಷ್ಟು ನಿಮ್ಮ ಆರೋಗ್ಯದ ಬಗ್ಗೆ ನೀವೇ ಕಾಳಜಿ ತೆಗೆದುಕೊಳ್ಳಿ, ಆದಷ್ಟು ಮನೆಯಲ್ಲೇ ಇರಿ. ಆರಾಮಾಗಿರಿ…

- Advertisement -
spot_img

Latest News

error: Content is protected !!