ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ಇಂದು ಮಂಗಳೂರು ನಗರದ ಬೋಳೂರು ಪರಿಸರದಲ್ಲಿ 2 ಕೊರೊನ ಸೋಂಕು ದೃಢಪಟ್ಟಿದೆ. ಬಂಟ್ವಾಳದಲ್ಲಿ 1 ಪ್ರಕರಣ ದೃಢ ಪಟ್ಟಿದೆ.
ಸೋಂಕಿತ ಸಂಖ್ಯೆ 390ರ ಸಂಪರ್ಕದಿಂದ ಜಿಲ್ಲೆಯ ಬಂಟ್ವಾಳದ 16 ವರ್ಷದ ಬಾಲಕಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಮಂಗಳೂರಿನಲ್ಲಿ ಇಬ್ಬರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಹೊಂದಿದ ಮಹಿಳೆಯಿಂದ ಇಬ್ಬರಿಗೆ ವೈರಸ್ ತಾಗಿರುವುದು ಧೃಢವಾಗಿದೆ.
ಸೋಂಕಿತ ಸಂಖ್ಯೆ 536 ರೋಗಿಯಿಂದ 11 ವರ್ಷದ ಬಾಲಕಿ ಮತ್ತು35 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ಪಾಸಿಟಿವ್ ಆಗಿದೆ. ಇವರಿಬ್ಬರೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ನಿವಾಸಿಗಳಾಗಿದ್ದಾರೆ.
ರಾಜ್ಯದಲ್ಲಿ ಇಂದು 19 ಹೊಸ ಕೊರೋನಾ ಕೇಸ್ ಪತ್ತೆ
ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 19 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು 19 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.
ಅಂದಹಾಗೇ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ, ಬೆಂಗಳೂರು ನಗರದ ಇಬ್ಬರಿಗೆ, ಕಲಬುರ್ಗಿಯಲ್ಲಿ ಒಬ್ಬರಿಗೆ ಹಾಗೂ ಬಾಗಲಕೋಟೆಯಲ್ಲಿ 13 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ.
ಇನ್ನೂ ಕಿಲ್ಲರ್ ಕೊರೋನಾಗೆ ಇದುವರೆಗೆ 29 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ, ಸೋಂಕಿತರಾದಂತ 345 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.