Friday, June 5, 2026
Homeಕರಾವಳಿಕೇರಳ: ವಯನಾಡು ಜಿಲ್ಲೆಯಲ್ಲಿ ನ್ಯೂರೋ ವೈರಾಣು ಸೋಂಕು ಪತ್ತೆ...! ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ...!

ಕೇರಳ: ವಯನಾಡು ಜಿಲ್ಲೆಯಲ್ಲಿ ನ್ಯೂರೋ ವೈರಾಣು ಸೋಂಕು ಪತ್ತೆ…! ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ…!

- Advertisement -
- Advertisement -

ಕೇರಳ: ಕೇರಳದ ವಯನಾಡು ಜಿಲ್ಲೆಯಲ್ಲಿ ನ್ಯೂರೋ ವೈರಾಣು ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿಯ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ಸೋಂಕು ಕಲುಷಿತ ಆಹಾರ, ಕಲುಷಿತ ನೀರಿನಿಂದ ಹರಡಬಹುದು. ವಾಂತಿ-ಭೇದಿ, ವಾಕರಿಕೆ, ಹೊಟ್ಟೆ ನೋವು, ತಲೆ ನೋವು, ಮೈ-ಕೈ ನೋವು ಮತ್ತು ಸಾಧಾರಣ ಜ್ವರ ಲಕ್ಷಣಗಳು.

ಗಡಿ ಜಿಲ್ಲೆಗಳಲ್ಲಿ ಕ್ರಮಗಳು
ಕಾಯಿಲೆಯು ತೀವ್ರ ಅತಿಸಾರ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಭೇದಿಯ ಚಿಕಿತ್ಸೆಯನ್ನು ನೀಡಬೇಕು.

ಸೋಂಕು ಪೀಡಿತರ ನೇರ ಸಂಪರ್ಕ ಮಾಡಬಾರದು ಮತ್ತು ಅವರು ಬಳಸಿದ ವಸ್ತುಗಳನ್ನು ಸಂಸ್ಕರಿಸದೆ ಬಳಸಬಾರದು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು. ಜಿಲ್ಲೆಗೆ ಒಬ್ಬ ವೈದ್ಯರನ್ನು ನೋಡಲ್‌ ಆಗಿ ನೇಮಿಸಿ ಸೂಕ್ತ ನಿರ್ವಹಣೆ ಮಾಡಲು ಸೂಚಿಸಬೇಕು. ಕುಡಿಯುವ ನೀರಿನ ಮೂಲಗಳ ಮಾಹಿತಿಯನ್ನು ಕಲೆ ಹಾಕಿ, ಮಾದರಿ ಸಂಗ್ರಹಿಸಿ ವಿಶ್ಲೇಷಣೆ ಮಾಡಬೇಕು. ರಸ್ತೆ ಬದಿಯ ಆಹಾರ ಸೇವಿಸಬಾರದು ಎಂದು ಸೂಚನೆ ನೀಡಿದೆ.

- Advertisement -

Latest News

error: Content is protected !!