Sunday, May 19, 2024
Homeಕರಾವಳಿಆನ್ ಲೈನ್ ತರಗತಿಗೆ ನೆಟ್ವರ್ಕ್ ಸಮಸ್ಯೆ: ಬೆಳ್ತಂಗಡಿಯ ಲಾಯಿಲದಲ್ಲಿ ಎತ್ತರ ಪ್ರದೇಶದಲ್ಲಿ ಶೆಡ್ ನಿರ್ಮಿಸಿಕೊಂಡು ಪಾಠ...

ಆನ್ ಲೈನ್ ತರಗತಿಗೆ ನೆಟ್ವರ್ಕ್ ಸಮಸ್ಯೆ: ಬೆಳ್ತಂಗಡಿಯ ಲಾಯಿಲದಲ್ಲಿ ಎತ್ತರ ಪ್ರದೇಶದಲ್ಲಿ ಶೆಡ್ ನಿರ್ಮಿಸಿಕೊಂಡು ಪಾಠ ಕೇಳುತ್ತಿದ್ದಾರೆ ಮಕ್ಕಳು

spot_img
- Advertisement -
- Advertisement -

ಬೆಳ್ತಂಗಡಿ: ಆನ್ ಲೈನ್ ಕ್ಲಾಸ್ ಗಳಿಗೆ  ನೆಟ್ ವರ್ಕ್ ಸಮಸ್ಯೆಯಿಂದ  ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿ   ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳ ಭವಿಷ್ಯದ  ಚಿಂತೆ  ಹೆತ್ತವರಿಗೆ  ಕಾಡಲಾರಂಭಿಸಿದೆ. ಗ್ರಾಮೀಣ ಭಾಗಗಳಲ್ಲಿ ಮಾತನಾಡಲೂ ನೆಟ್ ವರ್ಕ್ ಇಲ್ಲದ ಪ್ರದೇಶಗಳಲ್ಲಿ ಅನ್ ಲೈನ್ ಕ್ಲಾಸ್ ನಡೆಸುವುದಾದರೂ ಹೇಗೆ  ಏನ್ನುವ ಚಿಂತೆಯಲ್ಲಿ  ಶಿಕ್ಷಕರು ಇದ್ದಾರೆ  .ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ ಅತೀ ಹೆಚ್ಚು ಗ್ರಾಮೀಣ ಭಾಗಗಳಲ್ಲಿ ಈ ನೆಟ್ ಸಮಸ್ಯೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಅನ್ ಲೈನ್ ಕ್ಲಾಸ್ ಗೆ  ಸೇರಿಕೊಳ್ಳಲಾಗದೇ ಸಂಕಷ್ಟಕ್ಕೊಳಗಾಗಿದ್ದಾರೆ .

ಇದೇ ನೆಟ್ವರ್ಕ್ ಸಮಸ್ಯೆಯಿಂದ ಬೇಸತ್ತ ಬೆಳ್ತಂಗಡಿ ತಾಲೂಕಿನ ನಗರಕ್ಕೆ ಸಮೀಪವಿರುವ ಲಾಯಿಲ  ಗ್ರಾಮದ ಕೆಲವು ವಿದ್ಯಾರ್ಥಿಗಳು  ಆನ್ ಲೈನ್ ಕ್ಲಾಸ್ ಗಾಗಿ ದಾರಿಯೊಂದನ್ನು ಕಂಡು ಕೊಂಡಿದ್ದಾರೆ. ಎತ್ತರ ಜಾಗದಲ್ಲಿ ತಾತ್ಕಾಲಿಕವಾಗಿ   ಶೆಡ್ ನಿರ್ಮಿಸಿಕೊಂಡದ್ದಾರೆ.   ಆನ್ ಲೈನ್ ಕ್ಲಾಸ್ ಗಾಗಿ ಒಂದು ಟರ್ಪಲ್ ಹಾಕಿ ಮನೆ ನಿರ್ಮಿಸಿ ಕೆಲವು ವಿದ್ಯಾರ್ಥಿಗಳು ಪಾಠವನ್ನು ಕೇಳುತ್ತಿದ್ದಾರೆ.ಇಂತಹ ಸ್ಥಿತಿ ತಾಲೂಕಿನ ಇತರ ಗ್ರಾಮದಲ್ಲಿಯೂ ಇದ್ದು ವಿದ್ಯಾರ್ಥಿಗಳು ಮನೆಯಿಂದ ದೂರದ  ಎತ್ತರ ಪ್ರದೇಶದ ಗುಡ್ಡದಲ್ಲಿ ಹೋಗಿ ಪಾಠ ಕೇಳುವ ಅನಿವಾರ್ಯತೆ ಎದುರಾಗಿದೆ.

ನಗರ ವ್ಯಾಪ್ತಿಯ ಮಕ್ಕಳಿಗೆ ನೆಟ್ ವರ್ಕ್   ಸಮಸ್ಯೆ   ಇಲ್ಲದೇ ಇರುವುದರಿಂದ ಅವರಿಗೆ ಸಮಸ್ಯೆ ಇಲ್ಲ.  ಅದರೆ ಗ್ರಾಮೀಣ ಭಾಗಗಳಲ್ಲಿ ತುಂಬಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.ಬೆಳ್ತಂಗಡಿ ತಾಲೂಕಿನ ಹಲವೆಡೆ ನೆಟ್ ವರ್ಕ ಸಮಸ್ಯೆ ಹೆಚ್ಚಾಗಿ ಇದ್ದು ಶಿಕ್ಷಕರೂ ಕೂಡ ಒದ್ದಾಡುವಂತಾಗಿದೆ. ಅದ್ದರಿಂದ ಸರ್ಕಾರಗಳು ಗ್ರಾಮೀಣ ಭಾಗದ ಜನರ ಸಮಸ್ಯೆಯ ಬಗ್ಗೆಯೂ ಯೋಚಿಸಿ  ಸೂಕ್ತವಾದ ನೆಟ್ ವರ್ಕ್ ಸಿಗುವಂತೆ‌ ಅಲ್ಲಲ್ಲಿ ಟವರ್ ಗಳನ್ನು ನಿರ್ಮಿಸಿ‌ ಗ್ರಾಮೀಣ ಭಾಗದಲ್ಲೂ ನೆಟ್ ವರ್ಕ್ ಸಮಸ್ಯೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು  ಇದನ್ನೆಲ್ಲ ಕೇವಲ ನಗರ ವ್ಯಾಪ್ತಿಗೆ‌ ಮಾತ್ರ ಸೀಮಿತಗೊಳಿಸದೇ ಗ್ರಾಮೀಣ ಭಾಗದ ಜನರ ಸಮಸ್ಯೆಗಳನು ಆಲಿಸಿ ಸಮಸ್ಯೆಗಳನ್ನು ಪರಿಹರಿಸಲು ಚಿಂತನೆ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!