Wednesday, June 3, 2026
Homeಕರಾವಳಿನೆಲ್ಯಾಡಿ: ನಿನ್ನೆ ಅಡಿಕೆ ಮಾರಿದ್ದು ತಿಳಿದು ಇಂದು ಬೆಳಿಗ್ಗೆ ಮನೆಗೆ ನುಗ್ಗಿದ ಕಳ್ಳರು!

ನೆಲ್ಯಾಡಿ: ನಿನ್ನೆ ಅಡಿಕೆ ಮಾರಿದ್ದು ತಿಳಿದು ಇಂದು ಬೆಳಿಗ್ಗೆ ಮನೆಗೆ ನುಗ್ಗಿದ ಕಳ್ಳರು!

- Advertisement -
- Advertisement -

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿ ಗ್ರಾಮದ ಉದನೆಯ ಎಟೊಡಿ ಎಂಬಲ್ಲಿ ಇಂದು ಬೆಳಗ್ಗಿನ ಕಳ್ಳರು ಕರಾಮತ್ತು ತೋರಿಸಿದ್ದಾರೆ.

ಎಟೊಡಿ ಮನೆಯವರು ನಿನ್ನೆ ಅಡಿಕೆ ಮಾರಿ ಅದರ ಹಣವನ್ನು ಮನೆಗೆ ತಂದಿದ್ದರು ಎನ್ನಲಾಗಿದೆ. ಇದನ್ನು ಅರಿತ ಕಳ್ಳರ ಗುಂಪು ಇಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ್ದಾರೆ.

ಕಳ್ಳರ ಚಟುವಟಿಕೆಯನ್ನು ಗಮನಿಸಿರುವ ಮನೆಯ ಒಡತಿ ಹೊರಗೆ ಬಂದಾಗ ಕಳ್ಳರು ಇವರಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಮಹಿಳೆಯ ಬೊಬ್ಬೆ ಕೇಳಿ ಕಳ್ಳರ ಗುಂಪು ಪರಾರಿಯಾಗಿದೆ.

ಮನೆಯ ಎದುರಿಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಮತ್ತು ವಿದ್ಯುತ್ ಬಲ್ಬ್ ಗಳನ್ನು ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ಕೆಲದಿನಗಳ ಹಿಂದೆ ಇಲ್ಲಿಗೆ ಸಮೀಪದ ಪುತ್ತಿಗೆಯಲ್ಲಿ ಕೆಲ ಮನೆಗಳು ಮನೆಗೆ ನುಗ್ಗಿ ದರೋಡೆ ಮಾಡಿದ್ದರು.

- Advertisement -

Latest News

error: Content is protected !!