- Advertisement -
![]()
- Advertisement -
ನೆಲ್ಯಾಡಿ: ನಿನ್ನೆ ಸಂಜೆ ನೆಲ್ಯಾಡಿ ಸಮೀಪ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾವನ್ನಪ್ಪಿದವರನ್ನು ಶಿರಾಡಿ ಗ್ರಾಮದ ಶಿರ್ವತ್ತಡ್ಕ ನಿವಾಸಿ ನೆಲ್ಸನ್ (42)ಎಂದು ಗುರುತಿಸಲಾಗಿದೆ. ಟಿಪ್ಪರ್, ಇಕೋ ಹಾಗೂ ಲಾರಿಯೊಂದರ ಮಧ್ಯೆ ನಡೆದ ಸರಣಿ ಅಪಘಾತದ ನಡೆದಿದೆ. ಘಟನೆಯಲ್ಲಿ ಈಕೋದಲ್ಲಿದ್ದ ಶಿರಾಡಿ ನಿವಾಸಿ ಫೆಲಿಕ್ಸ್ ಎಂಬವರು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ. ಈಕೋ ಕಾರು ನೆಲ್ಯಾಡಿಯಿಂದ ಶಿರಾಡಿಗೆ ಹೋಗುತ್ತಿದ್ದು ಮಣ್ಣಗುಂಡಿಯಲ್ಲಿ ಕಲ್ಲಿದ್ದಲು ಸಾಗಾಟದ ಲಾರಿಯೊಂದನ್ನು ಓವರ್‍ಟೇಕ್ ಮಾಡುವ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಟಿಪ್ಪರ್ ಗೆ ಢಿಕ್ಕಿಯಾಗಿದೆ.
- Advertisement -


