Thursday, June 4, 2026
Homeತಾಜಾ ಸುದ್ದಿಬಿಗ್ ಬಾಸ್ ಸ್ಪರ್ಧಿ ನೇಹಾಗೌಡಗೆ ತಾಯಿಯಾದ ಸಂಭ್ರಮ!

ಬಿಗ್ ಬಾಸ್ ಸ್ಪರ್ಧಿ ನೇಹಾಗೌಡಗೆ ತಾಯಿಯಾದ ಸಂಭ್ರಮ!

- Advertisement -
- Advertisement -

ವಾಷಿಂಗ್ಟನ್ : ಬಿಗ್ಬಾಭಸ್ ಸೀಸನ್ 3ರ ಸ್ಪರ್ಧಿ ನೇಹಾ ಗೌಡ ತಾಯಿಯಾದ ಸಂಭ್ರಮದಲ್ಲಿದ್ದು, ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಕುರಿತು ನೇಹಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿಕೊಳ್ಳುವ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ನೇಹಾ ಗೌಡ ಪತಿಯೊಂದಿಗೆ ಅಮೆರಿಕಾದ ನಾರ್ತ್ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಪತಿ ಸೇರಿದಂತೆ ಕುಟುಂಬದವರು ತಮ್ಮ ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ನೇಹಾ ಗೌಡ ಅವರ ಸೀಮಂತ ಕಾರ್ಯ ಸರಳವಾಗಿ ನೆರವೇರಿತ್ತು. ಆಪ್ತರು ಕುಟುಂಬದವರು ಮತ್ತು ಸ್ನೇಹಿತರು ಸೀಮಂತ ಕಾರ್ಯದಲ್ಲಿ ಭಾಗಿಯಾಗಿದ್ದರು. ನಟಿ ನೇಹಾ ಅವರಿಗೆ ಹೆಣ್ಣು ಮಗುವಾಗಬೇಕು ಎನ್ನುವ ಆಸೆ ಇತ್ತು. ಅದರಂತೆ ಈಗ ಹೆಣ್ಣುವಾಗಿದೆ.

ನೇಹಾ ಗೌಡ ವೃತ್ತಿಯಲ್ಲಿ ಗಗನಸಖಿಯಾಗಿದ್ದು, ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್-3 ನಲ್ಲಿ ಭಾಗಿಯಾಗಿದ್ದ ನೇಹಾ ಗೌಡ ಬಿಗ್ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಬಿಗ್ ಮನೆಯಲ್ಲಿ ನೇಹಾ ರೆಹಮಾನ್, ಜಯಶ್ರಿ ಜೊತೆ ಉತ್ತಮ ಸ್ನೇಹ ಹೊಂದಿದ್ದರು. ಆದರೆ ಬಿಗ್ಬಾ ಸ್ ಮನೆಯಿಂದ 5ನೇ ಸ್ಪರ್ಧಿ ಆಗಿ ನೇಹಾ ಗೌಡ ಹೊರ ಬಂದಿದ್ದರು. ಬಿಗ್ ಮನೆಯಿಂದ ಹೊರಬಂದ ಮೇಲು ಮೂವರು ಸ್ನೇಹಿತರಾಗಿಯೆ ಮುಂದುವರೆದಿದ್ದರು.

- Advertisement -

Latest News

error: Content is protected !!