Friday, March 29, 2024
Homeಕ್ರೀಡೆವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಗೆ ಮುತ್ತಿಟ್ಟ  ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಗೆ ಮುತ್ತಿಟ್ಟ  ನೀರಜ್ ಚೋಪ್ರಾ

spot_img
- Advertisement -
- Advertisement -

ನವದೆಹಲಿ;ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಬೆಳ್ಳಿಗೆ ಮುತ್ತಿಟ್ಟಿದ್ದಾರೆ.

ಈ ಪಂದ್ಯಾವಳಿಯಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಮತ್ತು ಮೊದಲ ಭಾರತೀಯ ಪುರುಷ ಟ್ರ್ಯಾಕ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲೆಜೆಂಡರಿ ಅಂಜು ಬಾಬಿ ಜಾರ್ಜ್ ಅವರು 2003 ರ ಆವೃತ್ತಿಯಲ್ಲಿ ಲಾಂಗ್ ಜಂಪ್ ನಲ್ಲಿ ಕಂಚಿನೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದಿದ್ದರು.

ಹರ್ಯಾಣದ ಪಾಣಿಪತ್‌ನಲ್ಲಿರುವ ಚೋಪ್ರಾ ಅವರ ಮನೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ ನಂತರ ಸಂಭ್ರಮಾಚರಣೆ ನಡೆಯುತ್ತಿದೆ.

ಪದಕ ಘೋಷಣೆಯಾದ ಕೂಡಲೇ ಕುಟುಂಬ ಸದಸ್ಯರು ಅತಿಥಿಗಳಿಗೆ ಲಡ್ಡು ವಿತರಿಸುತ್ತಿರುವುದು ಕಂಡುಬಂದಿದೆ. ಹೆಚ್ಚಾಗಿ ಮನೆಯೊಳಗಿದ್ದ ಕುಟುಂಬದ ಮಹಿಳೆಯರು, ಅವರ ವಿಜಯವನ್ನು ಆಚರಿಸಲು ನೃತ್ಯ ಮಾಡಿದರು.

ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ನೀರಜ್ ಚೋಪ್ರಾ ಅವರ ತಾಯಿ ಸರೋಜ್ ಚೋಪ್ರಾ ತಿಳಿಸಿದ್ದಾರೆ. ನಾವು ಚಿನ್ನದ ಪದಕವನ್ನು ಗುರಿಯಾಗಿಸಿಕೊಂಡಿದ್ದೇವೆ

- Advertisement -
spot_img

Latest News

error: Content is protected !!