Saturday, June 28, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಮಳೆಹಾನಿ ಪ್ರದೇಶದಲ್ಲಿ ಕೇಂದ್ರ ತಂಡದಿಂದ ಪರಿಶೀಲನೆ;ಸವಣಾಲು & ಮೇಲಂತಬೆಟ್ಟುಗೆ NDRF ಮತ್ತು GSI...

ಬೆಳ್ತಂಗಡಿ : ಮಳೆಹಾನಿ ಪ್ರದೇಶದಲ್ಲಿ ಕೇಂದ್ರ ತಂಡದಿಂದ ಪರಿಶೀಲನೆ;ಸವಣಾಲು & ಮೇಲಂತಬೆಟ್ಟುಗೆ NDRF ಮತ್ತು GSI ತಂಡ ಭೇಟಿ

spot_img
- Advertisement -
- Advertisement -

ಬೆಳ್ತಂಗಡಿ : ವಿಪರೀತ ಮಳೆಯಿಂದ ಭೂ ಕುಸಿತವಾಗಿ ಹಾನಿಯಾದ ಬೆಳ್ತಂಗಡಿ ತಾಲೂಕಿನ ಮೂರು ಪ್ರದೇಶಕ್ಕೆ ಕೇಂದ್ರ ಸರಕಾರದ ಎರಡು ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಟ್ರೀ ಪಾರ್ಕ್ ಬಳಿಯ ಭೂಕುಸಿತ  ,ಮೇಲಂತಬೆಟ್ಟು ಗ್ರಾಮದ ನಾಗ ಬ್ರಹ್ಮ ಬದಿನಡೆ ಬಳಿಯ ಮನೆ ಹಾನಿ ಹಾಗೂ ಭೂಕುಸಿತ ಪ್ರದೇಶ , ಸವಣಾಲು ಗ್ರಾಮದ ಪಿಲಿಕಲ ರಸ್ತೆ ಭೂಕುಸಿತವಾದ ಪ್ರದೇಶಕ್ಕೆ ಕೇಂದ್ರ ಸರಕಾರದ NDRF ತಂಡ ಮತ್ತು GSI ತಂಡ ಆ.8 ರಂದು ಸಂಜೆ ಆಗಮಿಸಿ ಪರಿಶೀಲನೆ ನಡೆಸಿದೆ.

ಕೇಂದ್ರ ಸರಕಾರದ ಬೆಂಗಳೂರು ಕ್ಯಾಪ್ ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಇನ್ಸ್ಪೆಕ್ಟರ್ ಶಾಂತಿ ಲಾಲು ಮತ್ತು ತಂಡದ ಸಿಬ್ಬಂದಿ ಹಾಗೂ GSI (geological serve of india) ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಬ್ಬರು ಅಧಿಕಾರಿಗಳು ಜಂಟಿಯಾಗಿ ಆ. 8 ರಂದು ಸಂಜೆ ಬೆಳ್ತಂಗಡಿಯ ಮೂರು ಪ್ರದೇಶಗಳಿಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ , ಕಂದಾಯ ಇನ್ಸ್ಪೆಕ್ಟರ್ ಪ್ರತೀಷ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿ ಮಾಹಿತಿ ಕಲೆ ಹಾಕಿ ತೆರಳಿದ್ದಾರೆ‌.

- Advertisement -
spot_img

Latest News

error: Content is protected !!