Wednesday, May 15, 2024
Homeಕರಾವಳಿಬೆಳ್ತಂಗಡಿ;  ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ನಾಳೆಯಿಂದ ನವರಾತ್ರಿ ಸಂಭ್ರಮ

ಬೆಳ್ತಂಗಡಿ;  ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ನಾಳೆಯಿಂದ ನವರಾತ್ರಿ ಸಂಭ್ರಮ

spot_img
- Advertisement -
- Advertisement -

ಬೆಳ್ತಂಗಡಿ: ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವವು ಇದೇ ಬರುವ ದಿ.26/09/2022 ನೇ ಸೋಮವಾರದಿಂದ ದಿ. 05/10/2022ನೇ ಬುಧವಾರದವರೆಗೆ ನಡೆಯಲಿದೆ.

ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಹಾಗೂ ವಿಶೇಷ ಪೂಜೆ ನಡೆಯಲಿದ್ದು,  ದಿ. 05/10/2022, ಬುಧವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿರುವುದು. ದಿ. 02/10/2022ರಿಂದ ದಿ.04/10/2022ರ ವರೆಗೆ ಅಕ್ಷರಭ್ಯಾಸ ( ಬೆಳಿಗ್ಗೆ 09.00 ರಿಂದ  11.00 ಗಂಟೆಯ ವರೆಗೆ ) ನಡೆಯಲಿರುವುದು.

ದಿ. 03/10/2022, ಸೋಮವಾರ ದಂದು  ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವದಾನ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು. ದಿ. 04/10/2028, ಮಂಗಳವಾರದಂದು ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ. ದಿ. 05/10/2022, ಬುಧವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿದೆ.

ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೇಗುಲದ ಆಡಳಿತ ಮಂಡಳಿ ಮನವಿ ಮಾಡಿದೆ.                

- Advertisement -
spot_img

Latest News

error: Content is protected !!